Publish Date: Mon, 05 Oct 2020 (08:24 IST)
Updated Date: Mon, 05 Oct 2020 (08:27 IST)
ಚೆನ್ನೈ : ನಟ ಶಿವಾಜಿ ಗಣೇಶನ್ ಅವರ ಜನ್ಮ ದಿನಾಚರಣೆಯ ಕಾರ್ಯಕ್ರಮದಲ್ಲಿ ಅವರ ಪುತ್ರ ಪ್ರಭು ಅವರು ಕಾಣಿಸಿಕೊಳ್ಳದ ಹಿನ್ನಲೆಯಲ್ಲಿ ಅವರು ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ ಎಂಬ ಊಹಾಪೋಹಗಳು ಹರಿದಾಡಿದ್ದು, ಈ ಬಗ್ಗೆ ನಟ ಪ್ರಭು ಪ್ರತಿಕ್ರಿಯೆ ನೀಡಿದ್ದಾರೆ.
ಅಕ್ಟೋಬರ್ 1 ರಂದು ನಟ ಶಿವಾಜಿ ಗಣೇಶನ್ ಅವರ ಜನ್ಮ ದಿನಾಚರಣೆಯನ್ನು ಅಂಗವಾಗಿ ಅಂದು ಕಾರ್ಯಕ್ರಮವನ್ನು ಆಚರಿಸಲಾಗಿತ್ತು. ಆದರೆ ಅಂದು ಹಲವು ಗಣ್ಯರು ಆಗಮಿಸಿದ್ದರೂ ಕೂಡ ಅವರ ಪುತ್ರ ನಟ ಪ್ರಭು ಮಾತ್ರ ಕಾರ್ಯಕ್ರಮಕ್ಕೆ ಬರಲಿಲ್ಲ. ಆದಕಾರಣ ಅವರಿಗೆ ಕೊರೊನಾ ವೈರಸ್ ತಗುಲಿದ್ದು, ಅದಕ್ಕಾಗಿ ಅವರು ಯಾರ ಸಂಪರ್ಕದಲ್ಲಿಲ್ಲ ಎಂಬ ಊಹಾಪೋಹಗಳು ಕೇಳಿಬಂದಿವೆ.
ಈ ಬಗ್ಗೆ ಇದೀಗ ಸ್ಪಷ್ಟನೆ ನೀಡಿದ್ದ ನಟ ಪ್ರಭು, ನಾನು ಕೋವಿಡ್ ಸೋಂಕಿಗೆ ಒಳಗಾಗಿದ್ದೇನೆ ಎಂಬ ಸುದ್ದಿ ಸುಳ್ಳು. ಮಣಿರತ್ನಂ ಅವರ ಪೊನ್ನಿಯಿನ್ ಸೆಲ್ವನ್ ನಲ್ಲಿ ನಟಿಸುತ್ತಿದ್ದ ಕಾರಣ ಶೂಟಿಂಗ್ ವೇಳೆ ಪಾದಕ್ಕೆ ಪೆಟ್ಟಾಗಿದ್ದು, ಆದಕಾರಣ ಸಮಾರಂಭಕ್ಕೆ ಭಾಗವಹಿಸಲಿಲ್ಲ ಎಂದು ತಿಳಿಸಿದ್ದಾರೆ.