ರಾಜ್ಯ ಸರಕಾರ ಪ್ರತಿಯೊಬ್ಬರೂ ಮಾಸ್ಕ್ ಹಾಕೋದನ್ನು ಕಡ್ಡಾಯಮಾಡಲು ಜಾಗೃತಿ ಅಭಿಯಾನ ಮುಂದುವರಿಸಿದೆ.
ಅಲ್ಲದೇ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಹಾಕಿಕೊಳ್ಳದೇ ತಿರುಗಾಡಿದರೆ ದಂಡ ಬೀಳೋದು ಪಕ್ಕಾ.
ನಗರ ಪ್ರದೇಶದಲ್ಲಿ ಮಾಸ್ಕ್ ಧರಿಸದಿದ್ದರೆ 1000 ರೂ., ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ 500 ರೂ. ದಂಡ ಬೀಳಲಿದೆ.
ಸಚಿವ ಡಾ.ಸುಧಾಕರ್ ಇದನ್ನು ಹೇಳಿದ್ದು, ಮಾಸ್ಕ್ ಧರಿಸದಿದ್ದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.