Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಎಂಇಎಸ್ ಇರಬೇಕಾದದ್ದು ಮಹಾರಾಷ್ಟ್ರದಲ್ಲಿ ಕರ್ನಾಟಕದಲ್ಲಿ ಅಲ್ಲ: ಶೋಭಾ ಕರಂದ್ಲಾಜೆ

ಎಂಇಎಸ್ ಇರಬೇಕಾದದ್ದು ಮಹಾರಾಷ್ಟ್ರದಲ್ಲಿ ಕರ್ನಾಟಕದಲ್ಲಿ ಅಲ್ಲ: ಶೋಭಾ ಕರಂದ್ಲಾಜೆ
bangalore , ಗುರುವಾರ, 23 ಡಿಸೆಂಬರ್ 2021 (21:36 IST)
ಬೆಳಗಾವಿಯಲ್ಲಿ ಉದ್ದೇಶಪೂರ್ವಕವಾಗಿ ಗಲಭೆಗಳನ್ನು ಮಾಡುತ್ತಿದ್ದಾರೆ. ಎಂಇಎಸ್ ಪುಂಡಾಟಿಕೆಯ ಜೊತೆ ಕಾಂಗ್ರೆಸ್ ಇರುವ ಗುಮಾನಿ ಕೂಡ ಕಾಡುತ್ತಿದೆ. ಎಂಇಎಸ್ ಇರಬೇಕಾದದ್ದು ಮಹಾರಾಷ್ಟ್ರದಲ್ಲಿ ಕರ್ನಾಟಕದಲ್ಲಿ ಅಲ್ಲ. ಸರ್ಕಾರಕ್ಕೆ ಕೆಟ್ಟ ಹೆಸರು ತಂದು, ಅಧಿವೇಶನವನ್ನು ವಿಫಲಗೊಳಿಸುವ ವ್ಯವಸ್ಥಿತಿ ಷಡ್ಯಂತ್ರ ನಡೆಯುತ್ತಿದೆ, ಇದರ ಕುರಿತು ಸಮಗ್ರ ತನಿಖೆಯಾಗಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಎಂಇಎಸ್ ಹಾಗೂ ಕಾಂಗ್ರೆಸ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಚಿಕ್ಕಮಗಳೂರು ನಗರದಲ್ಲಿ ನಗರಸಭೆ ಚುನಾವಣೆ ಹಿನ್ನೆಲೆ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಮಾಡಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಕನ್ನಡಿಗರು-ಮರಾಠಿಗರು ಎಂದು ಬೇಧ-ಭಾವವಿಲ್ಲ, ಅನುದಾನ ಹಾಗೂ ಯೋಜನೆಗಳನ್ನು ಇಬ್ಬರಿಗೂ ಸಮಾನವಾಗಿ ನೀಡಿದ್ದೇವೆ. ಎಲ್ಲಾ ಧರ್ಮದವರಿಗೂ ಕೊಟ್ಟಿದ್ದೇವೆ. ಹಿಂದೂ-ಮುಸ್ಲಿಂ-ಕ್ರೈಸ್ತ ಎಲ್ಲರಿಗೂ ಏಕಪ್ರಕಾರವಾಗಿ ನೀಡಿದ್ದೇವೆ ಎಂದರು.
ಬೆಳಗಾವಿ, ಬೀದರ್, ಬಿಜಾಪುರ, ಚಿಕ್ಕೋಡಿ ಭಾಗದವರಿಗೆ ಅನ್ಯಾಯ ಮಾಡಿಲ್ಲ. ಅವರನ್ನು ಒಂದೇ ತಾಯಿ ಮಕ್ಕಳಂತೆ ನೋಡಿದ್ದೇವೆ. ಅನಾವಶ್ಯಕವಾಗಿ, ರಾಜಕೀಯ ಪ್ರೇರಿತವಾಗಿ ನಡೆಯುತ್ತಿರುವ ಗಲಭೆಗಳ ಬಗ್ಗೆ ನಾವು ಎಚ್ಚರಗೊಳ್ಳಬೇಕು. ಕನ್ನಡಿಗರು-ಮರಾಠಿಗರು, ಜಾತಿ-ಧರ್ಮ ಎಂಬುದನ್ನು ನೋಡದೆ ಬಿಜೆಪಿ ಸರ್ಕಾರ ಏಖಮುಖವಾಗಿ ಯೋಜನೆ-ಅನುದಾನ ಕೊಡುತ್ತಿದ್ದೇವೆ. ಈಗಾಗಲೇ ಗಲಭೆಕೋರನ್ನು ಬಂಧಿಸಿ ಗೂಂಡಾ ಕಾಯ್ದೆ, ದೇಶದ್ರೋಹದ ಕಾಯ್ದೆಯಡಿ ಕ್ರಮಕೈಗೊಳ್ಳಲು ಸರ್ಕಾರ ಮುಂದಾಗಿದೆ. ಇಂದು ಕೂಡ ಕಲ್ಲು ಬಿಸಾಡಿದ್ದಾರೆ. ಬಸ್‍ಗಳು ನಿಂತಿದ್ದಾವೆ ಎಂಬ ವರದಿ ಇದೆ. ಬೆಳಗಾವಿಯ ಘಟನೆಗೆ ಮಹಾರಾಷ್ಟ್ರ ಸರ್ಕಾರವೇ ಇದಕ್ಕೆ ಕುಮ್ಮುಕ್ಕು ನೀಡುತ್ತಿದೆ ಎಂದು ಆರೋಪಿಸಿದ್ದಾರೆ.
ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಕೇವಲ ಮರಾಠಿಗರಿಗೆ ಮಾತ್ರ ಸಿಎಂ ಅಲ್ಲ, ಇಡೀ ರಾಜ್ಯಕ್ಕೆ ಸಿಎಂ ಅಕ್ಕಪಕ್ಕದ ರಾಜ್ಯದವರ ಜೊತೆ ಚೆನ್ನಾಗಿರಬೇಕು ಅದು ಅವರ ಜವಾಬ್ದಾರಿ ಜೊತೆಗೆ ಅವರು ಈ ಬಗ್ಗೆ ಕ್ಷಮೆ ಕೇಳುವಂತೆ ಆಗ್ರಹಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ದೇಶದಲ್ಲಿ ಒಮಿಕ್ರಾನ್ ಸೋಂಕು ಹೆಚ್ಚಳ: ಪ್ರಧಾನಿ ಮೋದಿಯವರಿಂದ ಪರಿಶೀಲನಾ ಸಭೆ