Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬೆಂಗಳೂರು : ಅಕ್ಕನ ಗಂಡನ ಕಿರುಕುಳ ಸಹಿಸಲಾಗದೇ ನಾದಿನಿ ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಸಂತ್ರಸ್ತೆ 2015ರಲ್ಲಿ ಪತಿಯಿಂದ ಡಿವೋರ್ಸ್ ಪಡೆದು ತವರು ಮನೆಯಲ್ಲಿದ್ದಳು. ಆದರೆ ಇಬ್ಬರು ಮಕ್ಕಳ ತಂದೆಯಾಗಿದ್ದ ಅಕ್ಕನ ಗಂಡ ಆಕೆಯನ್ನು ಮದುವೆಯಾಗುವ ಬಯಕೆಯನ್ನು ಹೊಂದಿದ್ದು ಅದನ್ನು ವ್ಯಕ್ತಪಡಿಸಿದ್ದಾನೆ. ಆದರೆ ಸಂತ್ರಸ್ತೆ ಬೇರೆಯವರನ್ನು ಮದುವೆಯಾಗಲು ಮುಂದಾದಾಗ ಆಕೆಗೆ ಕಿರುಕುಳ ನೀಡಿದ್ದಾನೆ.
ಇದರಿಂದ ಬೇಸತ್ತ ಸಂತ್ರಸ್ತೆ ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.