ಬೆಂಗಳೂರು : ಹೋಲಿ ಹುಣ್ಣಿಮೆಯ ಹಿಂದಿನ 8 ದಿನಗಳನ್ನು ಹೋಲಾಷ್ಟಕ್ ಎಂದು ಕರೆಯುತ್ತಾರೆ. ಶುಕ್ಲ ಪಕ್ಷದ ಅಷ್ಟಮಿಯಿಂದ ಪ್ರಾರಂಭವಾಗಿ ಹುಣ್ಣಿಮೆಯವರೆಗೆ ಇರುತ್ತದೆ. ಆ ವೇಳೆ ಕೆಲವೊಂದು ಕೆಲಸಗಳನ್ನು ಮಾಡಬಾರದು. ಅದು ಯಾವ ಕೆಲಸಗಳು ಎಂಬುದನ್ನು ತಿಳಿದುಕೊಳ್ಳಿ.
ಹೋಲಾಷ್ಟಕ್ ಸಮಯದಲ್ಲಿ ಮದುವೆ, ಭೂಮಿ ಪೂಜಾ, ನಾಮಕರಣ, ಸಂಸ್ಕಾರ ಮುಂತಾದ ಕಾರ್ಯಗಳನ್ನು ಮಾಡಬಾರದು. ಯಜ್ಞ , ಹವನ್ ಮುಂತಾದ ವಿಶೇಷ ಆಚರಣೆಗಳನ್ನು ಮಾಡಬಾರದು.
ಈ ಸಮಯದಲ್ಲಿ ನೀವು ನಿಮ್ಮ ಇಷ್ಟದೇವರನ್ನು ಪೂಜಿಸಬೇಕು. ಉಪವಾಸ, ವ್ರತಗಳನ್ನು ಮಾಡಬೇಕು, ಹಣ, ಬಟ್ಟೆ ಮತ್ತು ಆಹಾರ ಧಾನ್ಯಗಳನ್ನು ದಾನ ಮಾಡಬೇಕು.