Publish Date: Fri, 17 Apr 2020 (19:33 IST)
Updated Date: Fri, 17 Apr 2020 (19:35 IST)
ದೇಶದಾದ್ಯಂತ ಕೊರೊನಾ ಲಾಕ್‍ಡೌನ್ ಮೇ 3 ರವರೆಗೆ ಮುಂದುವರೆದಿದ್ದು, ಈ ನಡುವೆ ಮದುವೆಯಾದ ನವಜೋಡಿಯು ಮಾನವೀಯತೆ ಮೆರೆದಿದೆ.
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಬೈಲೂರು ಸಂದೇಶ್ ಶೆಟ್ಟಿ ಹಾಗೂ ಬೆಳ್ತಂಗಡಿಯ ರಕ್ಷಿತಾ ಅವರ ವಿವಾಹವು ಕಣಂಜಾರಿನ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸರಳವಾಗಿ ನೆರವೇರಿದೆ.
ಸರಳ ವಿವಾಹವಾದ ಈ ಜೋಡಿ ತಮ್ಮ ವಿವಾಹದ ಖರ್ಚಿಗೆಂದು ತೆಗೆದಿಟ್ಟಿದ್ದ ಹಣದಿಂದ ಕೊರೊನಾ ಲಾಕ್‍ಡೌನ್ ನಡುವೆ ಹಸಿದಿರುವ ವಲಸೆ ಕಾರ್ಮಿಕರಿಗೆ, ಅಸಂಘಟಿತ ವಲಯದ ಕೆಲಸಗಾರರಿಗೆ, ರಸ್ತೆ ಬದಿಯ ಅನಾಥರಿಗೆ ಹಾಗೂ ಮನೆ ತಲುಪದ ನಿರಾಶ್ರಿತರು ಸೇರಿದಂತೆ ಸುಮಾರು 400 ಮಂದಿಗೆ ಕೊರೊನಾ ಎಮೆರ್ಜೆನ್ಸಿ ತಂಡದವರ ಮೂಲಕ ಊಟವನ್ನು ನೀಡಿ ಸಮಾಜಕ್ಕೆ ಮಾದರಿಯಾಗಿದ್ದಾರೆ.