ಲಾಕ್ ಡೌನ್ ನಡುವೆಯೂ ಮೀನು ಪ್ರಿಯರು ಫುಲ್ ಖುಷ್ ಆಗಿದ್ದಾರೆ.
ಲಾಕ್‌ಡೌನ್ ಘೋಷಣೆಯಾದ ಬಳಿಕ ಇದೇ ಮೊದಲ ಬಾರಿಗೆ ಉತ್ತರಕನ್ನಡ ಜಿಲ್ಲೆಯ ಕರಾವಳಿಯಲ್ಲಿ ನಾಡದೋಣಿ ಮೀನುಗಾರಿಕೆ ಆರಂಭಗೊಂಡಿದೆ. ಇದು ಕರಾವಳಿಯ ಮೀನು ಪ್ರಿಯರಲ್ಲಿ ಸಂತಸ ತಂದಿದೆ.
ಜಿಲ್ಲೆಯ ಐದೂ ಕರಾವಳಿ ತಾಲೂಕುಗಳಿಂದ ನಾಡದೋಣಿ, ಪಾತಿ ದೋಣಿ ಮತ್ತು ಹತ್ತು ಎಚ್‌ಪಿ ಒಳಗಿನ ಇಂಜೀನ್ ಅಳವಡಿಸಿದ ದೋಣಿಗಳು ಸೇರಿದಂತೆ ಒಟ್ಟು 2155 ದೋಣಿಗಳು ಕಡಲಿಗಿಳಿದಿದ್ದವು. ಮೊದಲ ದಿನ 5569 ಕೆಜಿ ಹಾಗೂ ಎರಡನೇಯ 7742 ಕೆಜಿ ಮೀನು ಲಭ್ಯವಾಗಿದೆ.
ಮೀನುಗಾರರು ತಾವು ಹಿಡಿದ ಮೀನುಗಳನ್ನು ಮನೆಮನೆಗೆ ತೆಗೆದುಕೊಂಡು ಹೋಗಿ ಮಾರುವಂತೆ ತಿಳಿಸಲಾಗಿದೆ ಎಂದು ಮೀನುಗಾರಿಕಾ ಇಲಾಖೆಯ ಉಪನಿರ್ದೇಶಕ ಪಿ.ನಾಗರಾಜ್ ಮಾಹಿತಿ ನೀಡಿದ್ದಾರೆ.