ಮಹಿಳಾ ಬ್ಯಾಂಕ್ ಮ್ಯಾನೇಜರ್ ಒಬ್ಬರ ಮೇಲೆ ಬೆಳ್ಳಂಬೆಳಗ್ಗೆಯೇ ಅತ್ಯಾಚಾರ ನಡೆದಿದೆ.
ಸೆಖೆಯಾಗುತ್ತಿದೆ ಅಂತ ಮಹಿಳಾ ಮ್ಯಾನೇಜರ್ ಬಾಲ್ಕನಿಯ ಬಾಗಿಲು ತೆರೆದು ಮಲಗಿದ್ದಾರೆ. ಈ ಸಂದರ್ಭದಲ್ಲಿ ಒಳಗೆ ನುಗ್ಗಿದ ವ್ಯಕ್ತಿಯೊಬ್ಬ ಡೋರ್ ಲಾಕ್ ಮಾಡಿ ಅತ್ಯಾಚಾರ ಎಸಗಿ ಪರಾರಿಯಾಗಿದ್ದಾನೆ.
ಬ್ಯಾಂಕ್ ಮ್ಯಾನೇಜರ್ ಪತಿ ರಾಜಸ್ಥಾನದಲ್ಲಿರುವ ತನ್ನ ಊರಿಗೆ ಹೋಗಿದ್ದಾರೆ. ಹೀಗಾಗಿ ಮನೆಯಲ್ಲಿ ಮಹಿಳಾ ಮ್ಯಾನೇಜರ್ ಒಬ್ಬರೇ ಇದ್ದಾಗ ಈ ಅತ್ಯಾಚಾರ ನಡೆದಿದೆ.
ಮಧ್ಯಪ್ರದೇಶದಲ್ಲಿ ಘಟನೆ ನಡೆದಿದ್ದು, ಆರೋಪಿ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.