Publish Date: Mon, 30 Oct 2023 (09:20 IST)
Updated Date: Mon, 30 Oct 2023 (09:24 IST)
ನೋಯ್ಡಾ: ಆನ್ ಲೈನ್ ಡೆಲಿವರಿ ಆಪ್ ನಲ್ಲಿ ಆರ್ಡರ್ ಮಾಡಿದ್ದ ದಿನಸಿ ನೀಡಲು ಬಂದಿದ್ದ ಡೆಲಿವರಿ ಯುವಕ ಮಹಿಳೆಯ ಮಾನಭಂಗ ಮಾಡಿದ ಘಟನೆ ನಡೆದಿದೆ.
ಗ್ರೇಟರ್ ನೋಯ್ಡಾದಲ್ಲಿ ಈ ಘಟನೆ ನಡೆದಿದೆ. ಅಪಾರ್ಟ್ ಮೆಂಟ್ ನಲ್ಲಿ ವಾಸವಿದ್ದ ಮಹಿಳೆ ಮೊಬೈಲ್ ಆಪ್ ಮೂಲಕ ದಿನಸಿಗೆ ಆರ್ಡರ್ ಮಾಡಿದ್ದರು. ಆರೋಪಿ ದಿನಸಿ ವಸ್ತುಗಳೊಂದಿಗೆ ಬಂದಾಗ ಮನೆಯಲ್ಲಿ ಮಹಿಳೆ ಒಬ್ಬಳೇ ಇರುವುದನ್ನು ಗಮನಿಸಿದ್ದಾನೆ. ಆ ಸಂದರ್ಭದಲ್ಲಿ ಮಹಿಳೆಯ ಮೇಲೆ ಅತ್ಯಾಚಾರವೆಸಗಿ ಪರಾರಿಯಾಗಿದ್ದಾನೆ.
ಮಹಿಳೆ ಪೊಲೀಸರಿಗೆ ದೂರು ಸಲ್ಲಿಸಿದ್ದು ತಕ್ಷಣವೇ ಪೊಲೀಸರು ತಂಡ ರಚಿಸಿ ಆರೋಪಿಯನ್ನು ಹುಡುಕಾಡಿದ್ದಾರೆ. ಆತನ ಬಂಧನವಾದರೂ ತಪ್ಪಿಸಿಕೊಳ್ಳಲೆತ್ನಿಸಿದಾಗ ಪೊಲೀಸರು ಕಾಲಿಗೆ ಗುಂಡು ಹಾರಿಸಿದ್ದಾರೆ.