Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಬಿಜೆಪಿ-ಜೆಡಿಎಸ್ ಮೈತ್ರಿ: ಆರು ಎಂಪಿ ಕ್ಷೇತ್ರಗಳಿಗೆ ಡಿಮ್ಯಾಂಡ್ ಇಟ್ರಾ ಎಚ್‌ಡಿಕೆ....?

ಬಿಜೆಪಿ-ಜೆಡಿಎಸ್ ಮೈತ್ರಿ: ಆರು ಎಂಪಿ ಕ್ಷೇತ್ರಗಳಿಗೆ ಡಿಮ್ಯಾಂಡ್ ಇಟ್ರಾ ಎಚ್‌ಡಿಕೆ....?
bangalore , ಸೋಮವಾರ, 30 ಅಕ್ಟೋಬರ್ 2023 (21:00 IST)
೨೦೨೪ರ ಮಹಾಸಮರಕ್ಕೆ ಈಗಾಗಲೇ ದಳಪತಿಗಳು ಮತ್ತು ಬಿಜೆಪಿಯ ನಡುವೆ ಮೈತ್ರಿ ಮಾತುಕತೆ ಆಗಿದೆ. ಆದರೆ ಇದುವರೆಗೂ ಜೆಡಿಎಸ್‌ಗೆ ಬಿಜೆಪಿಯ ಕೇಂದ್ರದ ವರಿಷ್ಠರು ಅದೆಷ್ಟು ಲೋಕಸಭಾ  ಕ್ಷೇತ್ರಗಳನ್ನು ಬಿಟ್ಟು ಕೊಡುತ್ತೆ ಅನ್ನೋದರ ಬಗ್ಗೆ ಸ್ಪಷ್ಟ ಚಿತ್ರಣ ಹೊರ ಬಿದ್ದಿಲ್ಲ. 
 
ಡೆಲ್ಲಿಗೆ ಹೋಗಿ ಕೇಂದ್ರದ ಬಿಜೆಪಿ ವರಿಷ್ಠರ ಜೊತೆ ಹೆಚ್.ಡಿ ಕುಮಾರಸ್ವಾಮಿ ಅಧಿಕೃತವಾಗಿ ಮೈತ್ರಿ ಖಾತ್ರಿ ಮಾಡಿಕೊಂಡ ಬಳಿಕ, ೨೮ ಲೋಕಸಭಾ ಕ್ಷೇತ್ರಗಳಲ್ಲಿ ದಳಪತಿಗಳಿಗೆ ಸಿಗೋದು ಎಷ್ಟು ಎಂಬುದರ ಬಗ್ಗೆ ಹೆಚ್‌ಡಿಡಿ ಆಗಲಿ, ಇಲ್ಲ ಕುಮಾರಸ್ವಾಮಿ ಆಗಲೀ ಸ್ಪಷ್ಟವಾದ ಮಾಹಿತಿ ಕೊಟ್ಟಿಲ್ಲ. ಆ ಕಡೆ ಬಿಜೆಪಿಯ ಕಡೆಯಿಂದಲೂ ಜೆಡಿಎಸ್‌ಗೆ ಎಷ್ಟು ಕ್ಷೇತ್ರಗಳು ಸಿಗಲಿವೆ, ಅನ್ನೋದರ ಬಗ್ಗೆ ಸ್ಪಷ್ಟಿಕರಣ ಸಿಕ್ಕಿಲ್ಲ..
 
ಆದರೆ ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಯಲ್ಲಿ ಯಾರಿಗೆ ಎಷ್ಟು ಕ್ಷೇತ್ರ ಎಂಬುದರ ಬಗ್ಗೆ ಚರ್ಚಿಸಲು ಜೆಡಿಎಸ್ ನಾಯಕ ಹೆಚ್.ಡಿ ಕುಮಾರಸ್ವಾಮಿಯವರು ನವಂಬರ್ ೩ರಂದು ಡೆಲ್ಲಿಗೆ ತೆರಳಲಿದ್ದಾರೆ. ಮೊದಲಿಗೆ ಮೈತ್ರಿಯ ಮುಂದಾಳತ್ವ ವಹಿಸಿದ್ದ ಗೋವಾ ಸಿಎಂ ಪ್ರಮೋದ್ ಸಾವಂತ್‌ರನ್ನು ಹೆಚ್‌ಡಿಕೆ ಭೇಟಿ ಮಾಡಲಿದ್ದಾರೆ. ಆ ಬಳಿಕ ಕೆಲವೇ ದಿನಗಳ ಬಳಿಕ ಬಿಜೆಪಿಯ ವರಿಷ್ಠರ ಜೊತೆ ಜೆಡಿಎಸ್ ನಾಯಕರು ಸಭೆ ನಡೆಸಲಿದ್ದಾರೆ ಅನ್ನುವ ಮಾಹಿತಿ ಕೇಳಿ ಬರ್ತಾ ಇದೆ.
 
ದಳಪತಿಗಳ ಹೀಗೊಂದು ಬೇಡಿಕೆ ಇಡಬಹುದು ಅನ್ನುವ ಲೆಕ್ಕಾಚಾರ ಮುನ್ನಲೆಗೆ ಬಂದಿದೆ. ೨೮ ರಾಜ್ಯದ ಲೋಕಸಭಾ ಕ್ಷೇತ್ರಗಳ ಪೈಕಿ, ಜೆಡಿಎಸ್ ಪ್ರಮುಖವಾದ ಆರು ಕ್ಷೇತ್ರಗಳನ್ನು ಬಿಟ್ಟು ಕೊಡುವಂತೆ, ಮೋದಿ ಮತ್ತು ಅಮಿತ್‌ಶಾ ಜೊತೆಗೆ ಹೆಚ್.ಡಿ ಕುಮಾರಸ್ವಾಮಿ ಬೇಡಿಕೆ ಇಟ್ಟು ಬರಬಹುದು ಎನ್ನಲಾಗ್ತಿದೆ.

ಅದೇನೇ ಇರಲಿ ಜೆಡಿಎಸ್ ಮತ್ತು ಬಿಜೆಪಿಯ ಮೈತ್ರಿ ರಾಜಕಾರಣ, ಸದ್ಯ ರಾಜ್ಯದಲ್ಲಿ ಗ್ಯಾರಂಟಿ ದರ್ಬಾರ್ ನಡೆಸುತ್ತಿರುವ ಕಾಂಗ್ರೆಸ್‌ಗೆ ಅದ್ಯಾವ ಮಟ್ಟಿಗೆ ಪ್ರತಿರೋದವನ್ನು ಒಡ್ಡುತ್ತೋ ಅಂತ ಕಾದಷ್ಟೇ ನೋಡಬೇಕು......?

Share this Story:

Follow Webdunia kannada

ಮುಂದಿನ ಸುದ್ದಿ

ಡಿಕೆಶಿ ವಿರುದ್ಧ ರಮೇಶ್ ಜಾರಕಿಹೊಳಿ ಹೊಸ ಬಾಂಬ್