Publish Date: Sun, 22 Sep 2019 (21:06 IST)
Updated Date: Sun, 22 Sep 2019 (21:07 IST)
ಪಾಗಲ್ ಪ್ರೇಮಿಯೊಬ್ಬ ತನ್ನ ಲವರ್ ಮನೆ ಮುಂದೆಯೇ ಬೆಂಕಿ ಹಚ್ಚಿಕೊಂಡಿದ್ದಾನೆ.
ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಕಿಶನ್ ಎಂಬಾತ ತಾನು ಪ್ರೀತಿಸುತ್ತಿದ್ದ ಯುವತಿಯ ಮನೆ ಮುಂದೆಯೇ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಒಂದೇ ಮನೆಯಲ್ಲಿದ್ದ ಪ್ರೇಮಿಗಳು ಕಿತ್ತಾಡಿಕೊಂಡಿದ್ದಾರೆ. ಆಗ ಯುವತಿ ತನ್ನ ಮನೆಗೆ ಬಂದಿದ್ದಾಳೆ. ಇದರಿಂದ ರೋಸಿ ಹೋದ ಯುವಕ ಯುವತಿ ಮನೆಗೆ ಬಂದು ಸಾವಿಗೆ ಶರಣಾಗಿದ್ದಾನೆ.
ಪೆಟ್ರೊಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆ. ಉತ್ತರ ಪ್ರದೇಶದ ಮಹಾರಾಜ ಗಂಜ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ.