Publish Date: Thu, 19 Sep 2019 (09:07 IST)
Updated Date: Thu, 19 Sep 2019 (09:08 IST)
ಬೆಂಗಳೂರು: ನಿಮ್ಮ ಸಂಗಾತಿಯಾಗುವ ವ್ಯಕ್ತಿಯ ಗುಣ ಸ್ವಭಾವ ಹೇಗಿರುತ್ತದೆ ಎಂದು ನಿಮಗೆ ಕುತೂಹಲವಿರುತ್ತದೆ. ಆತ ಅಥವಾ ಆಕೆಯ ಗುಣಸ್ವಭಾವವನ್ನು ಅವರ ರಾಶಿಗನುಗುಣವಾಗಿ ಪತ್ತೆ ಮಾಡಬಹುದು.
ಮೇಷ ರಾಶಿ
ಮೇಷ ರಾಶಿಯ ಪುರುಷರು ಕಠಿಣ ನಿರ್ಧಾರ ತೆಗೆದುಕೊಳ್ಳುತ್ತಾರೆ, ಹಾಗೆಯೇ ತಮ್ಮೊಳಗೇ ಭಾವುಕರೂ ಆಗಿರುತ್ತಾರೆ. ಆದರೆ ಇವರು ಒಂದು ರೀತಿಯಲ್ಲಿ ಹಠವಾದಿಗಳು. ಹೀಗಾಗಿ ಇವರ ಸಂಗಾತಿಯಾಗುವವರ ಕನಸಿಗೆ, ಕಠಿಣ ಪರಿಶ್ರಮಕ್ಕೆ ಬೆಲೆ, ಪ್ರೋತ್ಸಾಹ ಕೊಡುತ್ತಾರೆ. ಆದರೆ ತಮ್ಮ ಸಂಗಾತಿ ಬಗ್ಗೆ ಅಷ್ಟೇ ಅತಿಯಾದ ಕಾಳಜಿ ಹೊಂದಿರುತ್ತಾರೆ. ಕೆಲವರಿಗೆ ಇದು ಉಸಿರುಗಟ್ಟಿಸಿದಂತೆ ಅನಿಸಬಹುದು.