Publish Date: Sat, 15 May 2021 (08:39 IST)
Updated Date: Sat, 15 May 2021 (08:41 IST)
ಬೆಂಗಳೂರು: ಮೇ 24 ರಂದು ಲಾಕ್ ಡೌನ್ ಮುಕ್ತಾಯಗೊಳ್ಳುತ್ತಿದ್ದು, ಮತ್ತೊಂದಷ್ಟು ದಿನ ಲಾಕ್ ಡೌನ್ ವಿಸ್ತರಿಸುವ ಬಗ್ಗೆ ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ.
ಈ ನಡುವೆ ಲಾಕ್ ಡೌನ್ ವಿಸ್ತರಿಸಿದರೆ ಸಾಮಾನ್ಯರ ಬದುಕು ನಾಯಿಪಾಡಾಗಲಿದೆ. ಈಗಾಗಲೇ ಲಾಕ್ ಡೌನ್ ನಿಂದಾಗಿ ಹಲವರು ಉದ್ಯೋಗ ಕಳೆದುಕೊಂಡಿದ್ದಾರೆ. ಇನ್ನಷ್ಟು ಜನ ಉದ್ಯೋಗದ ಬಗ್ಗೆ ಆತಂಕದಲ್ಲಿದ್ದಾರೆ.
ಇನ್ನೂ ಲಾಕ್ ಡೌನ್ ವಿಸ್ತರಣೆಯಾದರೆ ಹಲವು ಸಣ್ಣ ಉದ್ಯಮಗಳು ಸಂಪೂರ್ಣವಾಗಿ ಬಾಗಿಲ್ ಬಂದ್ ಆಗಲಿವೆ. ಇದರಿಂದ ಮಧ್ಯಮ ವರ್ಗದವರಿಗೆ ಹೆಚ್ಚು ಹೊಡೆತ ಬೀಳಲಿದೆ. ಅತ್ತ ಸರ್ಕಾರವೂ ಯಾವುದೇ ಪ್ಯಾಕೇಜ್ ಘೋಷಿಸಿಲ್ಲ. ಹೀಗಾಗಿ ಬಡ ವರ್ಗದವರಿಗೂ ತೊಂದರೆಯಾಗುವುದು ಖಚಿತ.