Publish Date: Fri, 14 May 2021 (11:03 IST)
Updated Date: Fri, 14 May 2021 (11:04 IST)
ಬೆಂಗಳೂರು: ಕೊರೋನಾ ಪ್ರಕರಣಗಳು ನಿಯಂತ್ರಣಕ್ಕೆ ಬಾರದ ಹಿನ್ನಲೆಯಲ್ಲಿ ಕರ್ನಾಟಕದಲ್ಲಿ ಲಾಕ್ ಡೌನ್ ವಿಸ್ತರಿಸಲು ಐಸಿಎಂಆರ್ ಸಲಹೆ ನೀಡಿದೆ.
ಎರಡನೇ ಅಲೆ ನಿಯಂತ್ರಿಸಲು ಐಸಿಎಂಆರ್ ಖಡಕ್ ಸಲಹೆಗಳನ್ನು ಪಾಲಿಸಲು ಸೂಚನೆ ನೀಡಿದೆ. ಅದರಂತೆ ಕರ್ನಾಟಕದಲ್ಲಿ ಅತೀ ಹೆಚ್ಚು ಪ್ರಕರಣಗಳಿರುವುದರಿಂದ ಲಾಕ್ ಡೌನ್ ವಿಸ್ತರಿಸಲು ಸಲಹೆ ನೀಡಿದೆ.
ಐಸಿಎಂಆರ್ ಸಲಹೆಯಂತೆ ಮೇ 24 ರ ಬಳಿಕವೂ ಕರ್ನಾಟಕದಲ್ಲಿ ಲಾಕ್ ಡೌನ್ ವಿಸ್ತರಣೆಯಾಗುತ್ತಾ ಅಥವಾ ಕೆಲವೊಂದಕ್ಕೆ ನಿರ್ಬಂಧ ಸಡಿಲಿಸಿ ಲಾಕ್ ಡೌನ್ ಮುಂದುವರಿಸುತ್ತಾ ಎಂದು ಕಾದು ನೋಡಬೇಕಿದೆ.