ಬೆಂಗಳೂರು: ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಕೊರೋನಾ ಪ್ರಕರಣಗಳು ಹೆಚ್ಚಿರುವ ಹಿನ್ನಲೆಯಲ್ಲಿ ಲಾಕ್ ಡೌನ್ ಮೇ 24 ರಂದೂ ಮುಗಿಯುವುದು ಅನುಮಾನವೆನಿಸಿದೆ.
ಮೇ 10 ರಿಂದ 24 ರವರೆಗೆ ಲಾಕ್ ಡೌನ್ ಘೋಷಿಸಲಾಗಿತ್ತು. ಅದರಲ್ಲಿ ಈಗಾಗಲೇ ಒಂದು ವಾರ ಕಳೆದರೂ ಪರಿಸ್ಥಿತಿ ಸುಧಾರಿಸಿಲ್ಲ. ಬದಲಾಗಿ ಎಲ್ಲಾ ಜಿಲ್ಲೆಗಳಲ್ಲೂ ಪಾಸಿಟಿವಿಟಿ ಪ್ರಮಾಣ ಶೇ.10 ಕ್ಕಿಂತ ಹೆಚ್ಚಿದೆ.
ಉತ್ತರ ಕನ್ನಡದಲ್ಲಿ ಅತೀ ಹೆಚ್ಚು ಅಂದರೆ 46.6 ಶೇಕಡಾ ಪಾಸಿಟಿವಿಟಿ ಪ್ರಮಾಣವಿದೆ. ನಂತರದ ಸ್ಥಾನ ಬಳ್ಳಾರಿಗೆ. ಸದ್ಯಕ್ಕೆ ಕೊರೋನಾ ಪ್ರಕರಣಗಳ ದೃಷ್ಟಿಯಲ್ಲಿ ರಾಜ್ಯವೇ ದೇಶಕ್ಕೆ ನಂ.1 ಹೀಗಾಗಿ ಲಾಕ್ ಡೌನ್ ಮೇ ಅಂತ್ಯದವರೆಗೂ ವಿಸ್ತರಣೆಯಾಗುವ ಸಾಧ‍್ಯತೆಯಿದೆ ಎನ್ನಲಾಗಿದೆ.