Publish Date: Sat, 03 Aug 2019 (15:00 IST)
Updated Date: Sat, 03 Aug 2019 (15:02 IST)
ಅನರ್ಹಗೊಂಡಿರೋ ಶಾಸರು ನಡತೆಗೆಟ್ಟ ಹುಡುಗಿಯರಿದ್ದಂತೆ. ಹೀಗಂತ ಕೈ ಪಾಳೆಯದ ಮುಖಂಡರೊಬ್ಬರು ಲೇವಡಿ ಮಾಡಿದ್ದಾರೆ.
ಮೈತ್ರಿ ಪಕ್ಷಗಳ 17 ಶಾಸಕರನ್ನು ಕರೆದುಕೊಂಡು ಹೋಗಿ ನಮ್ಮವರು ಎನ್ನುತ್ತಿದ್ದಾರೆ. ಆದರೆ ನಡತೆಗೆಟ್ಟ ಹುಡುಗಿ ಮನೆಯ ಹೊಸ್ತಿಲನ್ನ ಹಾರಿ ಹೋದರೆ ಏನ್ಮಾಡಬೇಕು ಎಂದು ಕಾಂಗ್ರೆಸ್ ನಾಯಕ ಸಿ.ಎಂ.ಇಬ್ರಾಹಿಂ ಲೇವಡಿ ಮಾಡಿದ್ರು.
ಮಕ್ಕಳನ್ನು ಹುಟ್ಟಿಸೋಕೆ ಧಮ್ ಇಲ್ಲದವರು ಬೇರೆಯವರಿಗೆ ಹುಟ್ಟಿದ ಮಕ್ಕಳನ್ನು ಕರೆದುಕೊಂಡು ಅಧಿಕಾರ ಮಾಡುತ್ತಿದ್ದಾರೆ. ಅವರೆಂಥಾ ಗಂಡಸರು ಅಂತ ಬಿಜೆಪಿಯವರನ್ನ ಪರೋಕ್ಷವಾಗಿ ಕುಟುಕಿದ್ದಾರೆ.
ಬಾಂಬೆ ಶೇಟ್ ಪತಿವೃತೆಯರನ್ನ ಕರೆದುಕೊಂಡು ಹೋಗಿದ್ದಾನೆ ಎಂದು ಟಾಂಗ್ ನೀಡಿದ ಅವರು, ಮೂರು ದಿನ ಬಳಸಿದ ಬಳಿಕ ಈಗ ಅನರ್ಹ ಶಾಸಕರು ದೇವದಾಸಿಯಂತಾಗಿದ್ದಾರೆ ಎಂದು ಟೀಕೆ ಮಾಡಿದ್ದಾರೆ.