ಮುಂಬೈನಲ್ಲಿದ್ದುಕೊಂಡು ಸ್ಪೀಕರ್ ಆದೇಶದಿಂದ ಅನರ್ಹಗೊಂಡಿರೋ ಶಾಸಕರಿಬ್ಬರು ಬೆಂಗಳೂರಿಗೆ ಬಂದಿದ್ದಾರೆ.
ರಮೇಶ್ ಜಾರಕಿಹೊಳಿ, ಶ್ರೀಮಂತ್ ಪಾಟೀಲ್ ರಾಜಧಾನಿಗೆ ಆಗಮಿಸಿದ್ದಾರೆ.
ಅನರ್ಹತೆ ಪ್ರಶ್ನೆ ಮಾಡಿ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದೇವೆ. ದುರುದ್ದೇಶಪೂರ್ವಕವಾಗಿ ನಮ್ಮನ್ನ ಅನರ್ಹಗೊಳಿಸಲಾಗಿದೆ ಅಂತ ರಮೇಶ್ ಜಾರಕಿಹೊಳಿ ಹೇಳಿದ್ರು.
ಸ್ಪೀಕರ್ ಗೆ ಆ ದೇವರು ಒಳ್ಳೆಯದನ್ನ ಮಾಡಲಿ ಅಂತಂದ ರಮೇಶ್ ಜಾರಕಿಹೊಳಿ, ನ್ಯಾಯಾಲಯದಿಂದ ನ್ಯಾಯ ಸಿಗೋ ಭರವಸೆ ಇದೆ ಎಂದ್ರು.