Select Your Language

Notifications

webdunia
webdunia
webdunia
webdunia

ಅನರ್ಹ ಶಾಸಕರಿಗೆ ಬಿಗ್ ಶಾಕ್ ಕೊಡಲು ಕೈ ಪಡೆ ರೆಡಿ

ಮೈತ್ರಿ ಸರಕಾರ
ಮೈತ್ರಿ ಸರಕಾರ ಪತನಕ್ಕೆ ಕಾರಣವಾಗಿರೋ ಅನರ್ಹ ಶಾಸಕರಿಗೆ ಮತ್ತೊಂದು ಬಿಗ್ ಶಾಕ್ ನೀಡಲು ಕೈ ಪಡೆ ರೆಡಿಯಾಗಿದೆ.

ಅನರ್ಹಗೊಂಡಿರೋ ಶಾಸಕರ ಕ್ಷೇತ್ರದಲ್ಲಿ ಉಪಚುನಾವಣೆ ನಡೆಯಲಿದ್ದು, ಆ ಕ್ಷೇತ್ರಗಳಲ್ಲಿ ಗೆಲ್ಲಲೇ ಬೇಕೆಂಬ ಹಠಕ್ಕೆ ಬಿದ್ದಿರೋ ಕಾಂಗ್ರೆಸ್ ನಾಯಕರು, ವೀಕ್ಷಕರನ್ನ ನೇಮಕ ಮಾಡಿದ್ದಾರೆ.

ಆರ್ ಆರ್ ನಗರಕ್ಕೆ ಡಿ.ಕೆ.ಶಿವಕುಮಾರ್, ಕೆಆರ್ ಪುರಂಗೆ ಕೆ.ಜೆ.ಜಾರ್ಜ್, ಯಶವಂತಪುರಕ್ಕೆ ಎಂ.ಕೃಷ್ಣಪ್ಪ ಮತ್ತು ಜಮೀರ್ ಅಹ್ಮದ್ ಖಾನ್, ಮಹಾಲಕ್ಷ್ಮೀಲೇಔಟ್ ಗೆ ಮಾಗಡಿಯ ಬಾಲಕೃಷ್ಣ, ಕೆಆರ್ ಪೇಟೆಗೆ ಚೆಲುವರಾಯಸ್ವಾಮಿ, ಹುಣಸೂರು ವಿಧಾನಸಭಾ ಕ್ಷೇತ್ರಕ್ಕೆ ಮಾಜಿ ಸಚಿವ ಮಹದೇವಪ್ಪರನ್ನು ನೇಮಕ ಮಾಡಿದೆ.

ಇನ್ನು, ರಾಣೆಬೆನ್ನೂರಿಗೆ ಹೆಚ್.ಎಂ.ರೇವಣ್ಣ, ಗೋಕಾಕ್ ಗೆ ಶಿವಾನಂದ ಪಾಟೀಲ್, ಹೊಸಕೋಟೆಗೆ ಕೃಷ್ಣಭೈರೇಗೌಡ, ಮಸ್ಕಿಗೆ ಈಶ್ವರ ಖಂಡ್ರೆ, ಹಿರೇಕೆರೂರಿಗೆ ಹೆಚ್.ಕೆ.ಪಾಟೀಲ್ , ಅಥಣಿಗೆ ಎಂ.ಬಿ.ಪಾಟೀಲ್, ಕಾಗವಾಡಕ್ಕೆ ಸತೀಶ್ ಜಾರಕಿಹೊಳಿ ಅವರನ್ನ ಕೈ ಪಡೆ ನೇಮಕ ಮಾಡಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಅತ್ಯುತ್ತಮ ಆಸ್ಪತ್ರೆಗೆ ತುರ್ತು ಚಿಕಿತ್ಸೆ ಕೊಡೋರು ಯಾರು?