Publish Date: Tue, 24 Oct 2023 (15:40 IST)
Updated Date: Tue, 24 Oct 2023 (15:44 IST)
ದಸರಾ ಧರ್ಮ ಸಮ್ಮೇಳನದಲ್ಲಿ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿ ಅವಲೋಕ ಪರಾಮರ್ಶೆ ನಡೆಸಬೇಕೆಂದು ಮಾಜಿ ಮುಖ್ಯಮಂತ್ರಿ ಹಿರಿಯ ಕಾಂಗ್ರೆಸ್ ನಾಯಕ ಜಗದೀಶ ಶೆಟ್ಟರ್ ಹೇಳಿದರು.
ಲಿಂಗಸೂಗೂರಿನಲ್ಲಿ ಮಾತನಾಡಿದ ಅವರು, ರಂಭಾಪುರಿ ಜಗದ್ಗರುಗಳು ದಸಾರ ಧರ್ಮ ಸಮ್ಮೇಳನಕ್ಕೆ ಹಲವು ವರ್ಷಗಳ ಇತಿಹಾಸ ಇದೆ. ಧರ್ಮ ಪರಂಪರೆಯಲ್ಲಿ ದೊಡ್ಡ ಪರಂಪರೆಗೆ ನಾಂದಿ ಹಾಡಿ ದಸರಾ ಹಬ್ಬಕ್ಕೆ ಹೆಚ್ಚಿನ ಮಹತ್ವ ತಂದಿದ್ದಾರೆ. ಮಾನವ ಧರ್ಮಕ್ಕೆ ಜಯವಾಗಲಿ ಎನ್ನುವ ಪಂಚಪೀಠಗಳು ಜಾತಿ, ಮತ-ಪಂಥಗಳ ಹೇಳದೇ ಜನರನ್ನು ಒಗ್ಗಟ್ಟಾಗಿಸುವ ದೊಡ್ಡ ಸಂದೇಶ ಸಾರಿದ್ದಾರೆ. ಮಾನವ ಧರ್ಮಕ್ಕೆ ಜಯವಾಗಲಿ ಎಂಬುದು ಜಾತಿ ನಾಶಕ್ಕೆ ಕಾರಣವಾಗಲಿದೆ ಎಂದು ತಿಳಿಸಿದರು.