Publish Date: Sat, 21 Oct 2023 (19:20 IST)
Updated Date: Sat, 21 Oct 2023 (20:23 IST)
ಎರಡು ವರ್ಷ ಆದ ಮೇಲೆ ಡಿ.ಕೆ. ಶಿವಕುಮಾರ್ ಸಿಎಂ ಮಾಡಲೇಬೇಕು ಅಂತಾ ಶಾಸಕ ಶಿವಗಂಗಾ ಬಸವರಾಜ್ ಹೇಳಿದ್ದಾರೆ.. ದಾವಣಗೆರೆಯಲ್ಲಿ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷರಾದ ಮೇಲೆ ಹಗಲು ರಾತ್ರಿ ಕೆಲಸ ಮಾಡಿ ಪಕ್ಷ ಅಧಿಕಾರಕ್ಕೆ ತಂದಿದ್ದಾರೆ. ಅವರ ಕೆಲಸಕ್ಕೆ ನ್ಯಾಯ ಕೊಡಲೇಬೇಕು. ಡಿಕೆಶಿ ಸಿಎಂ ಆಗೇ ಆಗುತ್ತಾರೆ ಎಂದಿದ್ದಾರೆ. ಇನ್ನು ಸಿಬಿಐ ತನಿಖೆನಾದ್ರು ಮಾಡಲಿ ಖುದ್ದು ಗೃಹಮಂತ್ರಿ ಅಮಿತಾ ಷಾ ಬಂದು ತನಿಖೆ ಮಾಡಲಿಡಿ.ಕೆ.ಶಿವಕುಮಾರ್ ರನ್ನ ಏನೂ ಮಾಡಿಕೊಳ್ಳೋಕೆ ಸಾಧ್ಯ ಇಲ್ಲ. ಡಿಕೆ ಶಿವಕುಮಾರ್ ಅವರು ಕರೆಕ್ಟಾಗಿ ಇದ್ದಾರೆ..ಉತ್ತಮ ಆಡಳಿತ ನೋಡಿ ಸಹಿಸಿಕೊಳ್ಳೋಕೆ ಆಗ್ತಿಲ್ಲ. ಸುಪ್ರೀಂ ಕೋರ್ಟ್ ಆರ್ಡರ್ ಸ್ವಾಗತ ಮಾಡುತ್ತೇವೆ.ನಾವು ಹೆದರುವ ಅವಶ್ಯಕತೆ ಇಲ್ಲ ಎಂದು ತಿಳಿಸಿದ್ರು