ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಗಾರ್ಡನ್ ಸಿಟಿಯಲ್ಲಿ ಕಂಬಳ ಆಯೋಜಿಸಲಾಗ್ತಿದೆ. 150 ಕ್ಕೂ ಹೆಚ್ಚು ಕೋಣಗಳ ಜೋಡಿಗಳು ಈ ಸ್ಪರ್ಧೆಯಲ್ಲಿ ಭಾಗಿ ಸಾಧ್ಯತೆಯಿದೆ. ನವೆಂಬರ್ 24 -25 ರಂದು ನಗರದ ಅರಮನೆ ಮೈದಾನದಲ್ಲಿ ಕಂಬಳ ಆಯೋಜಿಸಲಾಗಿದೆ. ಹತ್ತು ಲಕ್ಷಕ್ಕೂ ಅಧಿಕ ಜನರು ಸೇರುವ ನಿರೀಕ್ಷೆ ಇದೆ ಅಂತ ಸಮಿತಿ ಹೇಳಿಕೆ ನೀಡಿದೆ. ದಕ್ಷಿಣ ಕನ್ನಡ ಹಾಗೂ ಕರಾವಳಿ ಭಾಗದಲ್ಲಿ ಕಂಬಳ ಉತ್ಸವ ಪ್ರಸಿದ್ಧ ಪಡೆದಿದೆ. ಆಯೋಜನೆ ಸಮಿತಿ ಈಗಾಗಲೇ ಕಂಬಳಕ್ಕೆ ಗುದ್ದಲಿ ಪೂಜೆ ಮಾಡಿದೆ. ಕಳೆದ ಎರಡು ದಿನಗಳಿಂದ ಅರಮನೆ ಮೈದಾನದಲ್ಲಿ ಕಂಬಳ ಓಟಕ್ಕೆ ಟ್ಯ್ರಾಕ್ ರೆಡಿ ಮಾಡ್ತಿದೆ. ಆದ್ರೆ ಇದುವರೆಗೆ ಅಗ್ನಿಶಾಮಕ ದಳ, ಬಿಬಿಎಂಪಿ ಹಾಗೂ ಪೊಲೀಸರ ಅನುಮತಿ ಸಿಕ್ಕಿಲ್ಲ. ಲಕ್ಷಾಂತರ ಜನ ಸೇರೋ ಮೇಳಕ್ಕೆ ಇದುವರೆಗೆ ಪಾಲಿಕೆಯಿಂದ ಅನುಮತಿ ಕೊಟ್ಟಿಲ್ಲ. ಇತ್ತ ಪಾಲಿಕೆ ಆಯುಕ್ತರನ್ನ ಕೇಳುದ್ರೆ ನಮ್ಮ ಬಳಿ ಅನುಮತಿ ಕೇಳಿಲ್ಲ ಅಂತಾರೆ. ಅನುಮತಿಗೆ ಮನವಿ ಮಾಡಿದ್ರೆ, ಜಾಗ ಪರಿಶೀಲನೆ ಮಾಡಿ ಕಾನೂನು ಪ್ರಕಾರ ಕ್ರಮ ಕೈಗೊಳ್ತೇವೆ ಅಂತ ತಿಳಿಸಿದ್ದಾರೆ.