Publish Date: Sat, 27 Mar 2021 (10:22 IST)
Updated Date: Sat, 27 Mar 2021 (10:24 IST)
ಬೆಂಗಳೂರು: ಸರಿಯಾಗಿ ವೇತನ ಸಿಗದಿದ್ದರಿಂದ ಸಾಲ ತೀರಿಸಲಾಗದೇ ಸಾರಿಗೆ ನೌಕರನೊಬ್ಬ ಸಾವಿಗೆ ಶರಣಾದ ಘಟನೆ ರಾಣಿಬೆನ್ನೂರು ಬಳಿ ನಡೆದಿದೆ.
ಗೋಪಾಲರೆಡ್ಡಿ ಸೋಮರೆಡ್ಡಿ ಜಕ್ಕರೆಡ್ಡಿ (47) ಎಂಬವರು ಮೃತರು. ವಾಯುವ್ಯ ಸಾರಿಗೆಯಲ್ಲಿ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದ ಇವರಿಗೆ ಆರು ತಿಂಗಳಿನಿಂದ ಸರಿಯಾಗಿ ವೇತನವೇ ನೀಡಲಾಗಿರಲಿಲ್ಲ.
ಸಾಕಷ್ಟು ಸಾಲ ಮಾಡಿಕೊಂಡಿದ್ದ ಗೋಪಾಲರೆಡ್ಡಿಗೆ ಅತ್ತ ವೇತನವೂ ಇಲ್ಲದೇ ಸಾಲ ತೀರಿಸಲು ದಾರಿಯಿಲ್ಲದಂತಾಗಿತ್ತು. ಇದರಿಂದ ಹತಾಶೆಗೊಳಗಾದ ಅವರು ಮರಕ್ಕೆ ನೇಣು ಹಾಕಿಕೊಂಡು ಸಾವಿಗೆ ಶರಣಾಗಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.