Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬೆಂಗಳೂರು: ಅನೈತಿಕ ಸಂಬಂಧ ಹೊಂದಿದ್ದ ಪತ್ನಿಯ ಪ್ರಿಯಕರನನ್ನು ಪತಿಯೇ ಹತ್ಯೆ ಮಾಡಿದ ಘಟನೆ ಬ್ಯಾಡರಹಳ್ಳಿಯ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
26 ವರ್ಷದ ಶಿವಕುಮಾರ್ ಎಂಬಾತ ಹತ್ಯೆಗೀಡಾದಾತ. 31 ವರ್ಷದ ಭರತ್ ಆರೋಪಿ. ಈತನ ಪತ್ನಿ ವಿನುತಾ ಮತ್ತು ಶಿವಕುಮಾರ್ ಅಕ್ರಮ ಸಂಬಂಧ ಹೊಂದಿದ್ದರು. ಎಂಟು ವರ್ಷಗಳ ಹಿಂದೆ ಭರತ್-ವಿನುತಾ ಪ್ರೀತಿಸಿ ಮದುವೆಯಾಗಿದ್ದರು. ಇಬ್ಬರು ಮಕ್ಕಳೂ ಇದ್ದಾರೆ.
ಹತ್ಯೆಗೀಡಾದ ಶಿವಕುಮಾರ್ ವಿನುತಾ ಊರಿನವನು. ಕೆಲಸ ಹುಡುಕಿಕೊಂಡು ಬಂದಿದ್ದ ಶಿವಕುಮಾರ್ ವಿನುತಾ ಮನೆಯಲ್ಲಿ ಉಳಿದುಕೊಂಡಿದ್ದ. ಈ ವೇಳೆ ಇವರಿಬ್ಬರೂ ಸಲುಗೆಯಿಂದ ಇದ್ದಿದ್ದಕ್ಕೆ ಭರತ್ ಜಗಳವಾಡಿದ್ದ. ಅದಾದ ಬಳಿಕ ಆತ ಮನೆಯಿಂದ ಹೊರಹೋಗಿದ್ದ.
ಇದೀಗ ಮತ್ತೆ ಶಿವಕುಮಾರ್ ವಿನುತಾಗೆ ಕರೆ ಮಾಡಿ ಮನೆಗೆ ಬರುವುದಾಗಿ ಹೇಳಿದ್ದ. ಆತ ಮನೆಗೆ ಬರುವ ವೇಳೆಗೆ ಹಬ್ಬದೂಟ ಮಾಡಳು ವಿನುತಾ ತಯಾರಾಗಿದ್ದಳು. ಇದನ್ನು ಗಮನಿಸಿದ ಭರತ್ ಮಂಚದ ಕೆಳಗೆ ಬಚ್ಚಿಟ್ಟುಕೊಂಡಿದ್ದ. ರಾತ್ರಿ ಮನೆಗೆ ಬಂದ ಶಿವಕುಮಾರ್-ವಿನುತಾ ಜೊತೆಯಾಗಿ ಕಾಲ ಕಳೆದಿದ್ದಾರೆ. ಬೆಳಗಿನ ಜಾವ ವಿನುತಾ ಸ್ನಾನ ಗೃಹಕ್ಕೆ ಹೋಗಿದ್ದಾಗ ಮಂಚದ ಕೆಳಗಿನಿಂದ ಹೊರಬಂದ ಭರತ್ ಚಾಕುವಿನಿಂದ ಹಲವು ಬಾರಿ ಇರಿದು ಶಿವಕುಮಾರ್ ಹತ್ಯೆ ಮಾಡಿದ್ದಾನೆ.