Publish Date: Wed, 24 Mar 2021 (10:27 IST)
Updated Date: Wed, 24 Mar 2021 (10:28 IST)
ಆಲಪ್ಪುಳ: ಆನ್ ಲೈನ್ ಜೂಜಾಟಕ್ಕೆ ಮತ್ತೊಬ್ಬ ಯುವಕನ ಬಲಿಯಾಗಿದೆ. ಕೇರಳದಲ್ಲಿ ಯುವಕನೊಬ್ಬ ಬೆಂಕಿಗೆ ಆಹುತಿಯಾಗಿದ್ದಾನೆ.
ಆನ್ ಲೈನ್ ಜೂಜಾಟಕ್ಕೆ ಸ್ನೇಹಿತನಿಂದ ಹಣ ಸಾಲವಾಗಿ ಪಡೆದಿದ್ದ 23 ವರ್ಷದ ಯುವಕ ಅತ್ತ ಜೂಜಾಟದಲ್ಲಿ ಹಣ ಕಳೆದುಕೊಂಡಿದ್ದ. ಇತ್ತ ಜೂಜಾಟದಲ್ಲಿ ಹಣ ಸಿಗದೇ ಸ್ನೇಹಿತನ ಸಾಲ ತೀರಿಸಲಾಗದೇ ಮನನೊಂದಿದ್ದ.
ಹೀಗಾಗಿ ತನಗೆ ತಾನೇ ಬೆಂಕಿ ಹಚ್ಚಿಕೊಂಡು ಜೀವ ಕೊನೆಗಾಣಿಸಿದ್ದಾನೆ. ತಕ್ಷಣವೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಜೀವ ಉಳಿಸಲಾಗಲಿಲ್ಲ. ಮೂಲಗಳ ಪ್ರಕಾರ ಸ್ನೇಹಿತನಿಂದ 60 ಸಾವಿರ ರೂ. ಸಾಲ ಪಡೆದಿದ್ದ ಎನ್ನಲಾಗಿದೆ. ಆದರೆ ತೀರಿಸಲಾಗದೇ ನೊಂದು ಪೆಟ್ರೋಲ್ ಸುರಿದುಕೊಂಡು ಜೀವ ಕೊನೆಗಾಣಿಸಿದ್ದಾನೆ.