Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬಾಲಕನನ್ನು ಅಪಹರಿಸಿ ಹಣಕ್ಕಾಗಿ ಚಿತ್ರಹಿಂಸೆ ನೀಡುತ್ತಿದ್ದ ಗ್ಯಾಂಗ್ ಅನ್ನು ಚಿಕ್ಕಬಳ್ಳಾಪುರದ ಗೌರಿಬಿದನೂರಿನ ಪೊಲೀಸರು ತಿರುಪತಿಯಲ್ಲಿ ಬಂಧಿಸಿದ್ದಾರೆ.
ಗೌರಿಬಿದನೂರಿನ 16 ವರ್ಷದ ಬಾಲಕನನ್ನು ಅಪಹರಿಸಿ ಚಿತ್ರಹಿಂಸೆ ನೀಡಿದ್ದ ಆಂಧ್ರ ಪ್ರದೇಶದ ದಾಮೋಧರ್, ಮುತ್ತುಶೆಟ್ಟಿ, ಲೋಕೇಶ್ ಕುಮಾರ್ ಸಿಕ್ಕಿಬಿದ್ದ ಆರೋಪಿಗಳು.
ಗೌರಿಬಿದನೂರಿನ ವಿಜೇಂದ್ರ ಎಂಬ ಬಾಲಕನನ್ನು ಅಪಹರಿಸಿದ್ದ ಗ್ಯಾಂಗ್ ಪೋಷಕರಿಂದ ಹಣ ನೀಡುವಂತೆ ಬೆದರಿಕೆ ಕರೆ ಮಾಡಿದ್ದರು. ಪೋಷಕರು ಮಗನ ಅಪಹರಣ ಕುರಿತು ಪೊಲೀಸರಿಗೆ ದೂರು ನೀಡಿದ್ದರು.
ಎಸ್ಪಿ ಮಿಥುನ್ ಕುಮಾರ್ ನೇತೃತ್ವದಲ್ಲಿ ಅಪಹರಣಕಾರರ ಜಾಡು ಹಿಡಿದು ಆಂಧ್ರ ಪ್ರದೇಶದ ತಿರುಪತಿಯಲ್ಲಿ ಅರೆಸ್ಟ್ ಮಾಡಿದ್ದಾರೆ.