ಕೋಲಾರದ ವಿದ್ಯುತ್ 220 ಕೆವಿ ಸ್ವೀಕರಣ ಕೇಂದ್ರ ಪವರ್ ಸಬ್ ಸ್ಟೇಷನ್ ನಲ್ಲಿ ಅಗ್ನಿ ಅವಘಡ ಸಂಭವಿಸಿದೆ.
110 ಎಂ.ಎಂ.ಇ ಟ್ರಾನ್ಸ್ ಫಾರಂ ಇಡೀ ಜಿಲ್ಲೆಗೆ ಎರಡು ಇದ್ದು ಅದರಲ್ಲಿ ಒಂದರಲ್ಲಿ ವೈರಿಂಗ್ ಸಮಸ್ಯೆಯಿಂದ ಸಣ್ಣಮಟ್ಟದ ಬೆಂಕಿ ಕಾಣಿಸಿಕೊಂಡಿದ್ದು, ಬೆಸ್ಕಾಂ ಸಿಬ್ಬಂದಿಗಳು ಬೆಂಕಿ ನಂದಿಸಿದ್ದಾರೆ.
ಟ್ರಾನ್ಸ್ ಫಾರಂ ನಲ್ಲಿ ಆಯಿಲ್ ಸೋರಿಕೆಯಾದ್ದರಿಂದ ಬೆಂಕಿ ಹೊತ್ತಿ ಹುರಿದಿದ್ದು ತಕ್ಷಣ ಅಗ್ನಿಶಾಮಕ ದಳಸ ಸಿಬ್ಬಂದಿ ಸ್ಥಳಕ್ಕಾಗಮಿಸಿ 1 ಗಂಟೆಗಳ ಕಾಲ ಬೆಂಕಿ ನಂದಿಸಲು ಹರಸಾಹಸ ಪಟ್ಟು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಂಕಿ ಅವಘಢದಿಂದ ದಟ್ಟ ಹೊಗೆ ಕಾಣಿಸಿಕೊಂಡಿದ್ದು ಮುಗಿಲೆತ್ತರಕ್ಕೆ ಬೆಂಕಿ ಕೆನ್ನಾಲಿಗೆ ಹೊತ್ತಿಹುರಿದಿದ್ದರಿಂದ ಕೆಲವು ಕಾಲ ಕೋಲಾರ ಜನರಲ್ಲಿ ಆಂತಕ ಮನೆ ಮಾಡಿತ್ತು, ಬೆಂಕಿಯ ಕೆನ್ನಾಲಿಗೆ 100 ಎಂ.ಎಂ.ಇ ಒಂದು ಟ್ರಾನ್ಸ್ ಫಾರಂ ಸಂಪೂರ್ಣ ಸುಟ್ಟು ಭಸ್ಮವಾಗಿದ್ದು, ಕೋಲಾರ ನಗರದ ಸೇರಿದಂತೆ ಕೆಲವು ಗ್ರಾಮೀಣ ಬಾಗಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
ಸ್ಥಳಕ್ಕೆ ನಗರ ಠಾಣೆ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರಲ್ಲದೆ ಅಗ್ನಿ ಅವಘಢ ನೋಡಲು ಜನರು ತಾ ಮುಂದು ತಾ ಮುಂದು ಎಂದು ಮುಂದಾಗಿದರು. ಟ್ರಾನ್ಸ್ ಫರಂ ಸಿಡಿದು ಮತ್ತಷ್ಟು ಅನಾಹುತ ಸಂಬಂವಿಸಬಹುದೆಂದು ಜನರನ್ನು ಕಂಟ್ರೋಲ್ ಮಾಡಲು ಹರಸಾಹಸ ಪಟ್ಟರು.
ಅಗ್ನಿ ಅವಗಡದಿಂದ ಟ್ರಾನ್ಸ್ ಫಾರಂ ಸುಟ್ಟು ಭಸ್ಮವಾಗಿರೋದ್ರಿಂದ ಸರಿಪಡಿಸಲು ಒಂದಷ್ಟು ಕಾಲ ಸಮಯ ತೆಗೆದುಕೊಳ್ಳುವುದರಿಂದ ಕೆಲವು ಕಡೆ ಕತ್ತಲಲ್ಲೆ ಕಾಲ ಕಳೆಯಬೇಕಾಗಿದೆ.