Publish Date: Sat, 04 Mar 2023 (15:41 IST)
Updated Date: Sat, 04 Mar 2023 (15:44 IST)
ಕರ್ನಾಟಕದಲ್ಲಿಯೂ ಆಮ್ ಆದ್ಮಿ ಪಕ್ಷ ಖಾತೆ ತೆರೆಯಲು ಪ್ರಯತ್ನ ಮುಂದುವರೆಸಿದೆ. ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ಪಕ್ಷ ಸಂಘಟನೆಗೆ ಆಪ್ ಪ್ಲಾನ್ ರೂಪಿಸಿದೆ. ಹೀಗಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಪಂಜಾಬ್ ಸಿಎಂ ಭಗವಂತ ಮಾನ್ ವಾಣಿಜ್ಯ ನಗರಿ ಹುಬ್ಬಳ್ಳಿಗೆ ಆಗಮಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ 40 ಪರ್ಸೆಂಟೇಜ್ ಸರ್ಕಾರವಿದೆ.. ಅದನ್ನು ಕಿತ್ತೊಗೆಯಬೇಕಿದೆ. ದೆಹಲಿಯಲ್ಲಿ ನಾವೇನು ಮಾಡಿದ್ದೇವೆ ಅಂತ ಜನರಿಗೆ ಗೊತ್ತಿದೆ. ಪಂಜಾಬ್ ಮತ್ತು ದೆಹಲಿಯಲ್ಲಿ ಪ್ರಾಮಾಣಿಕ ಸರ್ಕಾರ ಕೊಟ್ಟಂತೆ ಇಲ್ಲಿಯೂ ಕೊಡ್ತೇವೆ.. ಆ ನಿಟ್ಟಿನಲ್ಲಿ ಎಎಪಿ ಬಲವರ್ಧನೆ ಮಾಡ್ತೇವೆ ಎಂದರು