Publish Date: Sat, 04 Mar 2023 (15:09 IST)
Updated Date: Sat, 04 Mar 2023 (15:13 IST)
ಶಾಸಕ ಮಾಡಾಳ್ ವಿರುಪಾಕ್ಷಪ್ಪ ಪುತ್ರ ಪ್ರಶಾಂತ್ ಮೇಲೆ ಲೋಕಾಯುಕ್ತ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕರ ಕುಟುಂಬಸ್ಥರಿಗೂ ಸಂಕಷ್ಟ ಎದುರಾಗಿದೆ. ಕುಟುಂಬಸ್ಥರಿಗೆ ನೋಟಿಸ್ ಕೊಡಲು ಲೋಕಾಯುಕ್ತ ಪೊಲೀಸರು ಮುಂದಾಗಿದ್ದಾರೆ. ಪ್ರಶಾಂತ್ ಸಹೋದರ ಮಲ್ಲಿಕಾರ್ಜುನ್ಗೆ ನೋಟಿಸ್ ಕೊಡಲು ಸಿದ್ಧತೆ ನಡೆಸಿದ್ದಾರೆ.. ಪ್ರಶಾಂತ್ ಮಲ್ಲಿಕಾರ್ಜುನ್ಗೆ ಸೇರಿದೆ ಎನ್ನಲಾದ ಎರಡು ಕಂಪನಿ ಹೆಸರಿಗೆ ಹಣ ವರ್ಗಾಯಿಸಿದ್ದಾರೆ. ಪ್ರಶಾಂತ್ ಬಂಧನವಾದ ದಿನವೇ ಹಣ ವರ್ಗಾವಣೆಯಾಗಿದೆ.. ಬಿಎಸ್ ಸಣ್ಣಗೌಡರ್ ಅಂಡ್ ಬ್ರದರ್ಸ್ ಕಂಪನಿ ಮತ್ತು ಸಿದ್ದಲಿಂಗೇಶ್ವರ ಎಂಟರ್ ಪ್ರೈಸಸ್ ಎಂಬ ಕಂಪನಿಗೆ ಹಣ ವರ್ಗಾವಣೆಯಾಗಿದೆ. ಒಟ್ಟು 94 ಲಕ್ಷ ಹಣವನ್ನು ಪ್ರಶಾಂತ್ ವರ್ಗಾಯಿಸಿದ್ದಾರೆ.. ಈ ಬಗ್ಗೆ ಮಾಹಿತಿ ಕಲೆ ಹಾಕಿರುವ ಲೋಕಾಯುಕ್ತ ಪೊಲೀಸರು ನೋಟಿಸ್ ಕೊಡಲು ಸಿದ್ಧತೆ ನಡೆಸಿದ್ದಾರೆ.