Publish Date: Sat, 04 Mar 2023 (15:28 IST)
Updated Date: Sat, 04 Mar 2023 (15:30 IST)
ಕರ್ನಾಟಕದ ಜನತೆಯನ್ನು, ಕರ್ನಾಟಕದ ಆಸ್ತಿಯನ್ನ ಲೂಟಿ ಮಾಡುವ ಕೆಲಸ ನಡೆಯುತ್ತಿದೆ. ಯಾವುದೇ ಇಲಾಖೆಗೆ ಹೋದ್ರೂ ಲಂಚ, ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಶಾಸಕ ಕೃಷ್ಣ ಬೈರೆಗೌಡ ಹೇಳಿದ್ರು. 40% ಅಲ್ಲ 50ರಿಂದ 60% ಲೂಟಿ ನಡೆಯುತ್ತಿದೆ, ಇದರ ವಿರುದ್ಧ ಕಾಂಗ್ರೆಸ್ ನಿರಂತರವಾಗಿ ಹೋರಾಟ ಮಾಡ್ತಾ ಬಂದಿದೆ. ಆದ್ರೂ ಒಬ್ಬ ಶಾಸಕನ ಮನೆಯಲ್ಲಿ ಆಸ್ತಿ ಅಲ್ಲದೆ ಕೇವಲ ಹಣವೇ 8.32 ಕೋಟಿ ಸಿಗುತ್ತೆ ಅಂದ್ರೆ ರಾಜ್ಯದಲ್ಲಿ ಇನ್ನೆಷ್ಟು ಭ್ರಷ್ಟಾಚಾರ ನಡೆಯುತ್ತಿರಬಹುದು. ಹೀಗಾಗಿ ಬಿಜೆಪಿಯ ಎಲ್ಲ ಶಾಸಕ ಹಾಗೂ ಸಚಿವರ ಮನೆಗಳನ್ನು ಶೋಧ ಮಾಡಬೇಕು. ಅಮಿತ್ ಶಾ ಇದನ್ನೇ ಹೇಳಿದ್ದಾರೆ ಎಂದು ಕಾಣುತ್ತದೆ. ಹಾಗಾಗಿ ಕೋಟಿ ಕೋಟಿ ಭ್ರಷ್ಟಾಚಾರ ಮಾಡಿ ಎಲೆಕ್ಷನ್ ಗೆಲ್ಲಲು ಪ್ಲ್ಯಾನ್ ಮಾಡ್ತಿದ್ದಾರೆ ಅಂತ ಶಾಸಕ ಕೃಷ್ಣ ಬೈರೆಗೌಡ ಟೀಕಿಸಿದ್ರು.