Publish Date: Mon, 09 Dec 2019 (11:14 IST)
Updated Date: Mon, 09 Dec 2019 (11:15 IST)
ಬೆಂಗಳೂರು: ಉಪಚುನಾವಣೆ ಸಮರದಲ್ಲಿ ಬಿಜೆಪಿ ಭರ್ಜರಿ ಗೆಲುವಿನತ್ತ ದಾಪುಗಾಲಿಡುತ್ತಿದ್ದು, ಹೀರೇಕರೂರ್ ಕ್ಷೇತ್ರದಲ್ಲಿ ಬಿಸಿ ಪಾಟೀಲ್ ಭರ್ಜರಿ ಗೆಲುವು ದಾಖಲಿಸಿದ್ದಾರೆ.
ಕಾಂಗ್ರೆಸ್ ನಿಂದ ಬಂಡಾಯವೆದ್ದು ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದ ಬಿಸಿ ಪಾಟೀಲ್ ಉಪ ಸಮರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದರು. 24638 ಮತಗಳ ಅಂತರದಿಂದ ಬಿಸಿ ಪಾಟೀಲ್ ಗೆಲುವು ಕಂಡಿದ್ದಾರೆ.
ಇನ್ನೊಂದೆಡೆ ಕೆ ಆರ್ ಪುರಂನಲ್ಲಿ ಭೈರತಿ ಬಸವರಾಜ್, ಹೊಸಕೋಟೆಯಲ್ಲಿ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಗೆಲುವು ಬಹುತೇಕ ಖಚಿತವಾಗಿದೆ. ಇನ್ನು, ಯಶವಂತಪುರಂನಲ್ಲಿ ಜೆಡಿಎಸ್ ಜತೆಗೆ ಪೈಪೋಟಿ ಎದುರಿಸುತ್ತಿರುವ ಬಿಜೆಪಿಯ ಎಸ್ ಟಿ ಸೋಮಶೇಖರ್ ಇದೀಗ ಮತ್ತೆ ಮುನ್ನಡೆ ಕಾಯ್ದುಕೊಂಡಿದ್ದಾರೆ.