Publish Date: Mon, 09 Dec 2019 (10:59 IST)
Updated Date: Mon, 09 Dec 2019 (11:00 IST)
ಬೆಂಗಳೂರು: ಉಪಚುನಾವಣೆಯಲ್ಲಿ ಬಿಜೆಪಿ 11 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿರುವ ಸುದ್ದಿ ತಿಳಿಯುತ್ತಿದ್ದಂತೇ ಕಾಂಗ್ರೆಸ್ ಶಾಸಕ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
15 ಕ್ಷೇತ್ರಗಳಲ್ಲಿ ಜನರ ತೀರ್ಪು ಏನಿರುತ್ತದೋ ಅದಕ್ಕೆ ತಲೆಬಾಗುತ್ತೇವೆ. ಸೋತರೆ ಅದನ್ನು ಸ್ವೀಕರಿಸುತ್ತೇವೆ. ಪಕ್ಷಾಂತರಿಗಳನ್ನು ಜನ ಸ್ವೀಕರಿಸಿದ್ದಾರೆ. ನಾವು ಸೋಲನ್ನು ಸ್ವೀಕರಿಸುತ್ತೇವೆ. ಆದರೆ ಸೋಲಿನಿಂದ ಎದೆಗುಂದಲ್ಲ’ ಎಂದು ಡಿಕೆಶಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ.