Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಉಪ ಸಮರ: ಆರಂಭಿಕ ಹಂತದಲ್ಲಿ ಮುನ್ನಡೆ ಪಡೆದವರು ಅಭ್ಯರ್ಥಿಗಳ ವಿವರ

ಉಪ ಸಮರ: ಆರಂಭಿಕ ಹಂತದಲ್ಲಿ ಮುನ್ನಡೆ ಪಡೆದವರು ಅಭ್ಯರ್ಥಿಗಳ ವಿವರ
ಬೆಂಗಳೂರು , ಸೋಮವಾರ, 9 ಡಿಸೆಂಬರ್ 2019 (09:42 IST)
ಬೆಂಗಳೂರು: ರಾಜ್ಯ ಸರ್ಕಾರಕ್ಕೆ ಅಳಿವು ಉಳಿವಿನ ಪ್ರಶ್ನೆಯಾಗಿರುವ ಉಪ ಚುನಾವಣೆ ಫಲಿತಾಂಶ ಇಂದು ಹೊರಬೀಳಲಿದ್ದು, ಮತ ಎಣಿಕೆ ಕಾರ್ಯ ಸಾಗುತ್ತಿದೆ. ಆರಂಭಿಕ ಹಂತದಲ್ಲಿ ಆಡಳಿತಾರೂಢ ಬಿಜೆಪಿ ಮುನ್ನಡೆ ಸಾಧಿಸಿದೆ.


11 ಕ್ಷೇತ್ರದಲ್ಲಿ ಬಿಜೆಪಿ ಮುನ್ನಡೆಯಲ್ಲಿದ್ದರೆ, ಕಾಂಗ್ರೆಸ್ 2 ಮತ್ತು ಜೆಡಿಎಸ್ 1 ಸ್ಥಾನದಲ್ಲಿ ಮುನ್ನಡೆಯಲ್ಲಿದೆ. ಅದರಲ್ಲೂ ಯಲ್ಲಾಪುರದಲ್ಲಿ ಬಿಜೆಪಿ ಶಿವರಾಜ್ ಹೆಬ್ಬಾರ್ 47 ಸಾವಿರ ಮತಗಳ ಮುನ್ನಡೆಯಲ್ಲಿದ್ದು ಗೆಲುವಿನ ನಗೆ ಬೀರುವ ಮೊದಲ ಅಭ್ಯರ್ಥಿ ಎನಿಸಿಕೊಳ್ಳುವ ಲಕ್ಷಣ ಕಾಣುತ್ತಿದೆ.

ಕೆಆರ್ ಪುರಂನಲ್ಲಿ ಬಿಜೆಪಿಯ ಭೈರತಿ ಬಸವರಾಜ್, ಅಥಣಿಯಲ್ಲಿ ಬಿಜೆಪಿಯ ಮಹೇಶ್ ಕುಮಟಳ್ಳಿ, ವಿಜಯನಗರದಲ್ಲಿ ಬಿಜೆಪಿಯ ಆನಂದ್ ಸಿಂಗ್, ಹೊಸಕೋಟೆಯಲ್ಲಿ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ, ಮಹಾಲಕ್ಷ್ಮಿ ಲೇ ಔಟ್ ನಲ್ಲಿ ಬಿಜೆಪಿಯ ಕೆ ಗೋಪಾಲಯ್ಯ ಮುನ್ನಡೆ, ಯಶವಂತಪುರಂನಲ್ಲಿ ಬಿಜೆಪಿಯ ಎಸ್ ಟಿ ಸೋಮಶೇಖರ್, ಚಿಕ್ಕಬಳ್ಳಾಪುರದಲ್ಲಿ ಬಿಜೆಪಿಯ ಸುಧಾಕರ್, ಕೆ ಆರ್ ಪೇಟೆಯಲ್ಲಿ ನಾರಾಯಣ ಗೌಡ, ಕಾಗೇವಾಡದಲ್ಲಿ ಶ್ರೀಮಂತ ಪಾಟೀಲ್, ಹೀರೇಕರೂರ್ ನಲ್ಲಿ ಬಿಸಿ ಪಾಟೀಲ್,  ಗೋಕಾಕ್ ನಲ್ಲಿ ರಮೇಶ್ ಜಾರಕಿಹೊಳಿ ಮುನ್ನಡೆ,  ಶಿವಾಜಿನಗರದಲ್ಲಿ ಕಾಂಗ್ರೆಸ್ ನ ರಿಜ್ವಾನ್ ಅರ್ಷದ್, ರಾಣೆಬೆನ್ನೂರ್ ನಲ್ಲಿ ಅರುಣ್ ಕುಮಾರ್ ಮುನ್ನಡೆಯಲ್ಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಉನ್ನಾವೋ ಸಂತ್ರಸ್ತೆಯ ಕುಟುಂಬಕ್ಕೆ ಈಗ ಸಾಲು ಸಾಲು ನೆರವು