Publish Date: Mon, 24 Apr 2023 (18:40 IST)
Updated Date: Mon, 24 Apr 2023 (18:38 IST)
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ರಾಜ್ಯ ಭೇಟಿಗೆ ಮಾಜಿ ಸಚಿವ K.S. ಈಶ್ವರಪ್ಪ ಲೇವಡಿ ಮಾಡಿದ್ದಾರೆ.. ರಾಹುಲ್ ಗಾಂಧಿ ಲಿಂಗಾಯತರನ್ನು ಸೆಳೆಯುವಂತೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ಗೆ ಕರೆ ನೀಡಿದ್ದು, ಇದ್ರಿಂದಾಗಿ ಲಿಂಗಾಯತ ಸಮಾಜ ಬಿಜೆಪಿ ಕಡೆ ಇದೆ ಎಂಬುದನ್ನು ರಾಹುಲ್ ಗಾಂಧಿ ಒಪ್ಪಿಕೊಂಡಂತೆ ಆಯ್ತು ಎಂದು ವ್ಯಂಗ್ಯವಾಡಿದ್ದಾರೆ.. ಶಿವಮೊಗ್ಗದಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿ ಶಿವಮೊಗ್ಗಕ್ಕೆ ಕಾಲಿಟ್ಟು ಹೋದ್ರೆ ಸಾಕು ನಾವು ಗೆದ್ದಾಯ್ತು, ಅವರು ಬಂದು ಹೋದ್ರೆ ನಾವು ಹೆಚ್ಚಿನ ಅಂತರದಲ್ಲಿ ಗೆಲ್ಲಲು ಸಹಕಾರಿಯಾಗಲಿದೆ ಎಂದು ತಿಳಿಸಿದ್ರು.. ಮಾಜಿ ಸಿಎಂ ಸಿದ್ದರಾಮಯ್ಯಗೆ ನಾನು ವರುಣಾದಲ್ಲಿ ಗೆಲ್ಲೋದಿಲ್ಲ.. ಮುಖ್ಯಮಂತ್ರಿ ಆಗಲ್ಲ ಅನ್ನೋದು ಗೊತ್ತಿದೆ.. ನಾನಂತೂ ಹಾಳಾಗಿ ಹೋಗಿದ್ದೀನಿ.. ಕಾಂಗ್ರೆಸ್ ಹಾಳಾಗಿ ಹೋಗಲಿ ಅಂತಾ ಅವರು ಅನೇಕ ಹೇಳಿಕೆಗಳನ್ನು ಕೊಡ್ತಿದ್ದಾರೆ ಎಂದು ಲೇವಡಿ ಮಾಡಿದ್ರು.