Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಕೇಂದ್ರ ನಾಯಕರು ರಾಜ್ಯಕ್ಕೆ ದೌಡಾಯಿಸುತ್ತಿದ್ದು, ಬಿಜೆಪಿ ನಾಯಕರು ರಾಜ್ಯದಲ್ಲಿ ಬೀಡು ಬಿಟ್ಟಿದ್ದಾರೆ.. ಅಂತೆಯೇ ಕಾಂಗ್ರೆಸ್ ನಾಯಕರು ಸಹ ಆಗಮಿಸುತ್ತಿದ್ದು, ನಿನ್ನೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡಲಸಂಗಮಕ್ಕೆ ಭೇಟಿ ನೀಡಿದ್ರು.. ಈ ಮೂಲಕ ಲಿಂಗಾಯತ ಮತ ಬುಟ್ಟಿಗೆ ಕೈ ಹಾಕಿದ್ರು. ಇದೀಗ ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ನಾಳೆ ಸಾಂಸ್ಕೃತಿಕ ನಗರಿ ಮೈಸೂರಿಗೆ ಎಂಟ್ರಿ ಕೊಡಲಿದ್ದು, ಕಾಂಗ್ರೆಸ್ ಅಭ್ಯರ್ಥಿಗಳ ಪರ ಅಬ್ಬರದ ಪ್ರಚಾರ ನಡೆಸಲಿದ್ದಾರೆ.. 12.30ಕ್ಕೆ ಹೆಳವರಹುಂಡಿ, ಟಿ.ನರಸೀಪುರದಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಗಿಯಾಗಲಿರುವ ಪ್ರಿಯಾಂಕಾ ಗಾಂಧಿ, ನಂತರ ಹನೂರಿನಲ್ಲಿ ನಡೆಯಲಿರುವ ಮಹಿಳಾ ಸಂವಾದದಲ್ಲಿ ಭಾಗಿಯಾಗಲಿದ್ದಾರೆ.. ಸಂಜೆ 5 ಗಂಟೆಗೆ ಕೆ.ಆರ್.ನಗರಕ್ಕೆ ಪ್ರಿಯಾಂಕಾ ಆಗಮಿಸಲಿದ್ದು, 5.30 ರಿಂದ 6.30ರವರೆಗೆ ಕೆ.ಆರ್.ನಗರದಲ್ಲಿ ಪ್ರಿಯಾಂಕಾ ರೋಡ್ ಶೋ ನಡೆಸಲಿದ್ದಾರೆ.. ತೋಪಮ್ಮನ ದೇವಸ್ಥಾನ, ಅಂಬೇಡ್ಕರ್ ಪುತ್ಥಳಿ ಮಾರ್ಗದಿಂದ ಮುನ್ಸಿಪಾಲಿಟಿ ಆಫೀಸ್ ಸರ್ಕಲ್ವರೆಗೆ ಸುಮಾರು 2 ಕಿಲೋಮೀಟರ್ ಶೋ ನಡೆಸಲಿರುವ ಅವರು, ರೋಡ್ ಶೋ ಬಳಿಕ ಸಂಜೆ ಮೈಸೂರಿಗೆ ತೆರಳಲಿದ್ದಾರೆ.