Publish Date: Mon, 24 Apr 2023 (17:40 IST)
Updated Date: Mon, 24 Apr 2023 (18:04 IST)
ವಿಧಾನಸಭಾ ಚುನಾವಣೆ ಸನಿಹ ಹಿನ್ನೆಲೆ, ಸಿಎಂ ಬಸವರಾಜ ಬೊಮ್ಮಾಯಿ ರಾಜ್ಯದಲ್ಲಿ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ.. ದಾವಣಗೆರೆ ಜಿಲ್ಲೆಯ ಹರಿಹರ ವಿಧಾನಸಭಾ ಕ್ಷೇತ್ರದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಭರ್ಜರಿ ರೋಡ್ ಶೋ ನಡೆಸಿದ್ದಾರೆ.. ಹರಿಹರ ಬಿಜೆಪಿ ಅಭ್ಯರ್ಥಿ ಬಿ.ಪಿ.ಹರೀಶ್ ಪರವಾಗಿ ಸಿಎಂ ಬಸವರಾಜ ಬೊಮ್ಮಾಯಿ ಪ್ರಚಾರ ನಡೆಸಿದ್ದಾರೆ.. ಹರಿಹರ ಪಟ್ಟಣದಲ್ಲಿ 16 ಕಿಲೋಮೀಟರ್ ರೋಡ್ ಶೋ ಮಾಡಿದ್ದಾರೆ.. ಸಿಎಂ ಬೊಮ್ಮಾಯಿಗೆ ಬಿಜೆಪಿ ನಾಯಕರು ಸಾಥ್ ನೀಡಿದ್ದಾರೆ.. ಸಿಎಂ ಆಗಮನ ಹಿನ್ನೆಲೆ ಅಪಾರ ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದರು.. ರ್ಯಾಲಿಯಲ್ಲಿ ಬಿ.ಪಿ.ಹರೀಶ್ ಕಾರ್ಯಕರ್ತರು, ಬೆಂಬಲಿಗರು ಭಾಗಿಯಾಗಿದ್ರು