Publish Date: Tue, 04 Apr 2023 (16:00 IST)
Updated Date: Tue, 04 Apr 2023 (15:54 IST)
ಬಿಜೆಪಿ ಶಾಸಕರಾಗಿದ್ದ ಎನ್.ವೈ.ಗೋಪಾಲಕೃಷ್ಣ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಇಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್,ವಿಪಕ್ಷನಾಯಕ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಕೆಪಿಸಿಸಿ ಕಚೇರಿಯಲ್ಲಿ ಸೇರ್ಪಡೆ ಆದರು ಡಿಕೆಶಿವಕುಮಾರ್ ಗೋಪಾಲಕೃಷ್ಣ ಅವರಿಗೆ ಪಕ್ಷದ ಭಾವುಟ ಕೊಟ್ಟು ಸ್ವಾಗತ ಮಾಡಿಕೊಂಡರು. ನಂತರ ಮಾತನಾಡಿದ ಡಿಕೆಶಿವಕುಮಾರ್ ಗೋಪಾಲಕೃಷ್ಣ ಬಿಜೆಪಿಗೆ ರಿಸೈನ್ ಮಾಡಿದ್ರು,ಈಗ ನಮ್ಮ ಪಕ್ಷಕ್ಕೆ ಸೇರ್ಪಡೆಯಾಗ್ತಿದ್ದಾರೆ. ಶಿವಲಿಂಗೇಗೌಡರು ರಾಜೀನಾಮೆಸಲ್ಲಿಸಿದ್ದಾರೆ.ಅವರು 9 ರಂದು ಕ್ಷೇತ್ರಕ್ಕೆ ಬನ್ನಿ ಎಂದಿದ್ದಾರೆ ಎಂದಿದ್ದಾರೆ.ಈಗ ಗೋಪಾಲಕೃಷ್ಣ ಈಗ ಸೆರುತ್ತಿದ್ದಾರೆ.ಜೆಡಿಎಸ್ ಶಾಸಕರು ಬರುತ್ತಿದ್ದಾರೆ.ಅಧಿಕಾರ ಬದಲಾವಣೆಗೆ ಜನ ತೀರ್ಮಾನಿಸಿದ್ದಾರೆ ಎಂದು ಹೇಳಿದರು.ಇನ್ನೂ ಗೋಪಾಲಕೃಷ್ಣ ಅವರು ಮಾತನಾಡಿ ಕಾಂಗ್ರೆಸ್ ಕಚೇರಿಯ ಹತ್ತುವಕ್ಕಿಂತ ಮೊದಲು ಕೈ ಮುಗಿದು ಹತ್ತಿದ್ದೇವೆ.ನಮ್ಮ ತಾಯಿ ಅವರು ಕಾಂಗ್ರೆಸ್ ಪಕ್ಷಕ್ಕೆ ಬಿಟ್ಟು ಯಾವ ಪಕ್ಷಕ್ಕು ಸೇರುವುದಿಲ್ಲ ಎಂದು ಹೇಳಿದರು.1997 ರಲ್ಲಿ ನನಗೆ ಕಾಂಗ್ರೆಸ್ ಪಕ್ಷ ಟಿಕೇಟ್ ಕೊಟ್ಟಿತು.ಅವಾಗ ಗೆದ್ದು ನಾಲ್ಕು ಭಾರಿ ಶಾಸಕನಾಗಿದ್ದೇನೆ.ಅಲ್ಲಿಂದ ನಾನು ಹಿಂದೆ ತಿರುಗಿ ನೋಡೆಯಿಲ್ಲ.ಅನಿವಾರ್ಯ ಕಾರಣದಿಂದ ಬಿಜೆಪಿ ಸೆರಿಕೊಂಡೆ ಇನ್ನೂ ಯಾವುದೇ ಸಂದರ್ಭದಲ್ಲಿ ದುಡಿಕಿ ನಿರ್ಧಾರ ಕೈಗೊಳ್ಳುವುದಿಲ್ಲ ಎಂದರು.