Publish Date: Tue, 04 Apr 2023 (14:42 IST)
Updated Date: Tue, 04 Apr 2023 (14:12 IST)
ಮಧುಗಿರಿ ವಿಧಾನಸಭಾ ಕ್ಷೇತ್ರ ರಂಗೇರುತ್ತಿದೆ. ಮತದಾರರನ್ನ ಸೆಳೆಯಲು JDS ಶಾಸಕರು ಮುಖಂಡರು ಹಾಗೂ ಮತದಾರರಿಗೆ ಧರ್ಮಸ್ಥಳ ಪ್ರವಾಸ ಭಾಗ್ಯ ಕರುಣಿಸಿದ್ದಾರೆ. ಧರ್ಮಸ್ಥಳ ಸೇರಿದಂತೆ ಸುತ್ತಮುತ್ತಲ ಪುಣ್ಯಕ್ಷೇತ್ರಗಳಿಗೆ ಪ್ರವಾಸ ಕರೆದುಕೊಂಡು ಹೋಗುವುದಾಗಿ ಶಾಸಕರು ಹೇಳಿದ್ದಾರೆ. ಪ್ರವಾಸಕ್ಕೆ ಹೊರಟಿರುವುದು ಯಾರಲ್ಲಿಯೂ ಹೇಳಿಕೊಳ್ಳಬೇಡಿ. ನಾವೇ ವೈಯಕ್ತಿಕವಾಗಿ ಪ್ರವಾಸಕ್ಕೆ ಹೋಗಿ ಬರುತ್ತಿದ್ದೇವೆ ಎಂದು ಹೇಳಿ. ಕಾಫಿ, ತಿಂಡಿ ಖರ್ಚಿಗೆ ಶಾಸಕರು 20 ಸಾವಿರ ನೀಡಿದ್ದಾರೆ. ಹುಷಾರಾಗಿ ಹೋಗಿ ಬನ್ನಿ.ಹೊರನಾಡು, ಧರ್ಮಸ್ಥಳ, ಕುಕ್ಕೆ, ಸೌಥಡ್ಕ ಗಣಪತಿ ಕ್ಷೇತ್ರಗಳನ್ನು ನೋಡಿಕೊಂಡು ವಾಪಸ್ ಬನ್ನಿ ಎಂಬ ವಿಡಿಯೋ ವೈರಲ್ ಆಗಿದೆ. ಕಸಬಾ ವ್ಯಾಪ್ತಿಯ JDS ಗ್ರಾಮ ಪಂಚಾಯಿತಿ ಸದಸ್ಯರೊಬ್ಬರು ಪ್ರವಾಸ ಹೊರಟಿರುವ ತಂಡದ ಬಸ್ನಲ್ಲಿ ಮಾತನಾಡಿರುವ ವಿಡಿಯೋ ವೈರಲ್ ಆಗಿದೆ. ಈ ಕುರಿತು ದೊಡ್ಡೇರಿ ಹೋಬಳಿಯ ಮುಖಂಡರು ಚುನಾವಣಾಧಿಕಾರಿಗಳಿಗೆ ದೂರು ನೀಡಿದ್ದಾರೆ ಬಳಿಕ ಚುನಾವಣಾಧಿಕಾರಿಗಳು ಹಾಲಿ ಶಾಸಕ M.V ವೀರಭದ್ರಯ್ಯ ವಿರುದ್ಧ ದೂರು ದಾಖಲಿಸಿದ್ದಾರೆ.