Publish Date: Fri, 29 Mar 2019 (12:55 IST)
Updated Date: Fri, 29 Mar 2019 (12:57 IST)
ಜೆಡಿಎಸ್ ಸಚಿವರು ಹಾಗೂ ಮುಖಂಡರಿಗೆ ಐಟಿ ದಾಳಿ ಚುನಾವಣೆ ಸಮಯದಲ್ಲಿ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಸಚಿವ ಪುಟ್ಟರಾಜು ಸಂಬಂಧಿ ಮನೆ ಮೇಲೆ ಐಟಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ತಡರಾತ್ರಿ 1ಗಂಟೆವರೆಗೂ ದಾಖಲೆಗಳ ಪರಿಶೀಲನೆ ನಡೆದಿದೆ.
ಒಟ್ಟು 15 ಐಟಿ ಅಧಿಕಾರಿಗಳಿಂದ ನಡೆದಿದ್ದ ದಾಖಲೆಗಳ ಪರಿಶೀಲನೆ ಮುಕ್ತಾಯವಾಗಿದೆ. ಆದರೆ ತಡ ರಾತ್ರಿ ಕೆಲ ಮಹತ್ವದ ದಾಖಲೆ ತೆಗೆದುಕೊಂಡು ಅಧಿಕಾರಿಗಳು ಹೋಗಿದ್ದಾರೆ.
ಶಿವಕುಮಾರ್ ಕಂಟ್ರಾಕ್ಟರ್ ಕೆಲಸ ಮಾಡುತ್ತಿದ್ದರು. ಶಿವಕುಮಾರ್ ಆಡಿಟರ್, ಕೆಲ ಅಬಕಾರಿ ಅಧಿಕಾರಿಗಳನ್ನು ವಿಚಾರಣೆ ನಡೆಸಿದ್ದಾರೆ ಐಟಿ ತಂಡದವರು. ಮುಂದಿನ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಐಟಿ ಅಧಿಕಾರಿಗಳು ತೆರಳಿದ್ದಾರೆ.
Jagadeesh
Publish Date: Fri, 29 Mar 2019 (12:55 IST)
Updated Date: Fri, 29 Mar 2019 (12:57 IST)