ಮಾಜಿ ಸಚಿವರೊಬ್ಬರಿಗೆ ಬಿಗ್ ಶಾಕ್ ನೀಡಿದೆ.
ಮಾಜಿ ಸಚಿವ ರೋಷನ್ ಬೇಗ್ ಅವರು "Danish Publications" ಹೆಸರಿನಲ್ಲಿ ಅಕ್ರಮವಾಗಿ ಅತಿಕ್ರಮಿಸಿಕೊಂಡಿದ್ದ ಪಾಲಿಕೆಯ 40 ಕೋಟಿ ಮೌಲ್ಯದ ಅಮೂಲ್ಯ ಸ್ವತ್ತನ್ನು ಕೂಡಲೇ ವಶಕ್ಕೆ ಪಡೆಯುವಂತೆ ಪಾಲಿಕೆಯ ಆಯುಕ್ತರಿಗೆ ಆದೇಶ ಮಾಡಿದೆ. ಈ ಪ್ರಕರಣದಲ್ಲಿ ನ್ಯಾಯಾಲಯವು "ಈ ಸ್ವತ್ತಿನ ಮಾಲೀಕತ್ವ ಪಾಲಿಕೆಯದ್ದು" ಎಂದು ಐತಿಹಾಸಿಕ ತೀರ್ಪು ನೀಡಿದೆ.
ಬೆಂಗಳೂರು ನಗರ ಮತ್ತು ನಗರ ಜಿಲ್ಲೆಯ ಬಿಜೆಪಿ ವಕ್ತಾರರಾದ N.R.ರಮೇಶ್ ಅವರು ಈ ಬೃಹತ್ ಸರ್ಕಾರಿ ಭೂಕಬಳಿಕೆ ಹಗರಣವನ್ನು ದಾಖಲೆಗಳ ಸಹಿತ ಬಯಲಿಗೆಳೆದಿದ್ದರಲ್ಲದೇ, ರೋಷನ್ ಬೇಗ್ ಮತ್ತು ಪಾಲಿಕೆಯ ಶಿವಾಜಿನಗರ ವಿಭಾಗದ ಕಂದಾಯ ಅಧಿಕಾರಿಗಳ ವಿರುದ್ದ ACB, BMTF, ಲೋಕಾಯುಕ್ತಗಳಲ್ಲಿ ಮತ್ತು ACMM ನ್ಯಾಯಾಲಯದಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದರು.