Publish Date: Thu, 28 Mar 2019 (13:21 IST)
Updated Date: Thu, 28 Mar 2019 (13:22 IST)
ಐಟಿ ದಾಳಿ ಹಿನ್ನೆಲೆಯಲ್ಲಿ ಸಚಿವ ಪುಟ್ಟರಾಜು ಹೇಳಿಕೆಗೆ ಗರಂ ಆಗಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಪುಟ್ಟರಾಜುಗೆ ನಾಚಿಕೆ ಆಗಬೇಕು ಅಂತ ಟೀಕೆ ಮಾಡಿದ್ದಾರೆ.
ಐಟಿ ದಾಳಿಗೆ ಸುಮಲತಾ ಅಂಬರೀಶ್ ಕಾರಣ ಎಂಬ ಹೇಳಿಕೆ ನೀಡಿದ ಪುಟ್ಟರಾಜುಗೆ ನಾಚಿಕೆ ಆಗಬೇಕು. ಐಟಿ ದಾಳಿ ರಾಜಕೀಯ ಪ್ರೇರಿತ ಎನ್ನುವುದರಲ್ಲಿ ಅರ್ಥವಿಲ್ಲ. ಐಟಿ ಅಧಿಕಾರಿಗಳಿಗೆ ಅನುಮಾನ ಬಂದ್ರೆ ಅವರೇ ನೇರವಾಗಿ ದಾಳಿ ಮಾಡಿ ತನಿಖೆ ಮಾಡುತ್ತಾರೆ. ಇವರು ಪ್ರಾಮಾಣಿಕರಿದ್ದರೆ ಇವರಿಗೇಕೆ ಭಯ? ನಿನ್ನೆ ಸಿಎಂ ಕುಮಾರಸ್ವಾಮಿ ಹೇಳಿದ್ದನ್ನು ಕೇಳಿದ್ದೇನೆ.
ನಿನ್ನೆ ರಾತ್ರಿಯೇ ಅವರಿಗೆ ಮಾಹಿತಿ ಇತ್ತು ಅನ್ನೋದಾದ್ರೆ ಅವರು ಮೊದಲೇ ಬಂದೋಬಸ್ತ್ ಮಾಡಿಕೊಂಡಿದ್ದಾರೆ ಅನ್ನೋ ಅನುಮಾನವಿದೆ. ಸುಖಾಸುಮ್ಮನೆ ಸಿಬಿಐ, ಐಟಿ ಮೇಲೆ ಆರೋಪ ಮಾಡೋದು ಚಾಳಿ ಆಗಿದೆ.
ಇಂದು ನಾನು, ಎಸ್.ಎಂ.ಕೃಷ್ಣ ಹಾಗೂ ಕೆ.ಹೆಚ್.ಶ್ರೀನಿವಾಸ್ ಶಿವಮೊಗ್ಗಕ್ಜೆ ಹೋಗುತ್ತಿದ್ದೇವೆ. ಸಂಜೆ ವಾಪಸ್ ಬರುತ್ತೇವೆ. ನಾಮಪತ್ರ ಸಲ್ಲಿಕೆಯಲ್ಲಿ ಭಾಗಿಯಾಗುತ್ತೇವೆ ಎಂದ್ರು.