Publish Date: Thu, 07 Mar 2019 (15:46 IST)
Updated Date: Thu, 07 Mar 2019 (15:49 IST)
ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ನಿಂದ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಮಾಡುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಜನರ ಆಕ್ರೋಶ ಮುಂದುವರಿದಿದೆ.
ಜೆಡಿಎಸ್ ಮತ್ತು ದೇವೇಗೌಡರ ಕುಟುಂಬದ ವಿರುದ್ಧ ಆಕ್ರೋಶವನ್ನು ಜನರು ಹೊರಹಾಕುತ್ತಿದ್ದಾರೆ.
ಮಂಡ್ಯ ಅಣ್ಣತಮ್ಮಂದಿರ ಆಸ್ತಿ ಭಾಗ ಆಗಿದೆ. ಮಂಡ್ಯ ಚಿಕ್ಕೋನ್ಗೆ, ಹಾಸನ ದೊಡ್ಡೋನ್ಗೆ. ಅಚ್ಚುಪಾಲು ರಾಮನಗರ.
ಗೋ ಬ್ಯಾಕ್ ನಿಖಿಲ್ ಕುಮಾರಸ್ವಾಮಿ ವಿ ಸಪೋರ್ಟ್ ಅಂಬಿ ಫ್ಯಾಮಿಲಿ ಅಂತೆಲ್ಲ ಪೋಸ್ಟ್ ಗಳನ್ನು ಹರಿಬಿಡಲಾಗುತ್ತಿದೆ.
ಜೆಡಿಎಸ್ ಅಂದರೆ ಜಸ್ಟ್ ಫಾರ್ ದೇವೇಗೌಡ ಅಂಡ್ ಸನ್ಸ್. ಮಂಡ್ಯದಲ್ಲಿ ಜನತಾದಳಕ್ಕೆ ಬುನಾದಿ ಹಾಕಿದ ಎಸ್ ಡಿ ಜೆ ಪುತ್ರನ ರಾಜಕೀಯ ಪ್ರವೇಶಕ್ಕೆ ಅಡ್ಡಿಯಾದ ವಯಸ್ಸು ಮೊಮ್ಮಕ್ಕಳಿಗೇಕಿಲ್ಲಾ ಎಂತೆಲ್ಲಾ ಜನರು ಕೇಳ್ತಿದ್ದಾರೆ.
ಮಂಡ್ಯಕೆ 5 ಸಾವಿರ ಕೋಟಿ ರೂ. ಅನುದಾನ ಯಾಕೆ ಅಂತ ಇವಾಗ ಗೊತ್ತಾಗಿರಬೇಕು. ಅಭಿವೃದ್ದಿ ಹೆಸರಿನಲ್ಲಿ ಮಗನನ್ನ ಗೆಲ್ಲಿಸಿಕೊಳ್ಳುವ ತವಕ ಇದೆ. ಅಮ್ಮ ರಾಮನಗರ, ಅಪ್ಪ ಚೆನ್ನಪಟ್ಟಣ ಮಗ ಮಂಡ್ಯ ಬೆಂಗಳೂರಿಂದ ಮೈಸೂರು ವರೆಗೂ ಇವರ ಕುಟುಂಬವೇ ಆದ್ರೆ ಕಾರ್ಯಕರ್ತ ಏನ್ ಮಾಡೋದು ಅಂತೆಲ್ಲ ಜನರು ಪ್ರಶ್ನೆ ಮಾಡ್ತಿದ್ದಾರೆ.