Publish Date: Thu, 07 Mar 2019 (09:46 IST)
Updated Date: Thu, 07 Mar 2019 (09:48 IST)
ಮೈಸೂರು : ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಕುಟುಂಬ ರಾಜಕೀಯದ ಕುರಿತು ಬಿಜೆಪಿ ಶಾಸಕ ಪ್ರೀತಂ ಗೌಡ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬುಧವಾರ ಬಿಜೆಪಿಯ ಶಕ್ತಿ ಕೇಂದ್ರದ ಪ್ರಮುಖರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು,’ ದೇವೇಗೌಡರ ಕುಟುಂಬದ್ದು ಪ್ರೈವೇಟ್ ಲಿಮಿಟೆಡ್ ಕಂಪನಿ ಇದ್ದಂತೆ. ವೇದಿಕೆ ಮೇಲಿರುವ ಸಂಸದ ಪ್ರತಾಪ ಸಿಂಹ, ಶಾಸಕ ನಾಗೇಂದ್ರ, ನಾನೂ ಗೌಡರೇ. ನಾವೇನು ಪಾಕಿಸ್ತಾನ, ಆಘಾನಿಸ್ತಾನದಿಂದ ಬಂದಿದ್ದೇವೆಯೇ? ಎಂದು ಪ್ರಶ್ನಿಸಿದ್ದಾರೆ.
‘ದೇವೇಗೌಡರು ತಮ್ಮ ಕುಟುಂಬಕ್ಕೆ ಕ್ಷೇತ್ರವನ್ನು ಹಂಚಿಕೊಡುತ್ತಿದ್ದಾರೆ. ಕರ್ನಾಟಕವೇನು ದೇವೇಗೌಡರ ಅಪ್ಪನ ಮನೆ ಆಸ್ತೀನಾ? ಒಕ್ಕಲಿಗರಾರು ದೇವೇಗೌಡರಿಗೆ ಜಿಪಿಎ ಬರೆದುಕೊಟ್ಟಿಲ್ಲ’ ಎಂದು ಅವರು ಕಿಡಿಕಾರಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.