Publish Date: Mon, 01 May 2023 (20:10 IST)
Updated Date: Mon, 01 May 2023 (20:03 IST)
ಪ್ರಧಾನಿ ನರೇಂದ್ರ ಮೋದಿ ನಾಲಾಯಕ್ ಎಂಬ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಸಂಸದ ಡಾ ಉಮೇಶ್ ಜಾಧವ್ ತಿರುಗೇಟು ನೀಡಿದ್ದಾರೆ. ಕಲಬುರಗಿಯ ಚಿಂಚೋಳಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ನವರಿಗೆ ಕೆಟ್ಟ ಕಾಲ ಬಂದಿದೆ.. ಕಾಂಗ್ರೆಸ್ ಖತಮ್ ಆಗೋ ಕಾಲ ಸನ್ನಿಹಿತವಾಗಿದೆ. ನಾವು ಮಹಾಪುರುಷರನ್ನ ನೋಡಿಲ್ಲ.. ಇಂದು ಮೋದಿ ರೂಪದಲ್ಲಿ ಮಹಾ ಪುರುಷರನ್ನ ನೋಡುತ್ತಿದ್ದೇವೆ. ಮೋದಿಯವರನ್ನ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿಷಸರ್ಪ ಎಂದಿದ್ದಾರೆ. ತಂದೆ-ಮಗನ ಹೇಳಿಕೆಗೆ ಜನ ಚುನಾವಣೆಯಲ್ಲಿ ತಕ್ಕಪಾಠ ಕಲಿಸುತ್ತಾರೆ ಎಂದು ಸಂಸದ ಡಾ ಉಮೇಶ್ ಜಾಧವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ