Publish Date: Mon, 01 May 2023 (20:00 IST)
Updated Date: Mon, 01 May 2023 (20:04 IST)
ಕಾಂಗ್ರೆಸ್ ಸಂಸ್ಕೃತಿಯೆ ಪ್ರಧಾನಿ ನರೇಂದ್ರ ಮೋದಿಯವರನ್ನ ದೋಷಣೆ ಮಾಡೋದು ಅಂತಾ ಕಾಂಗ್ರೆಸ್ ವಿರುದ್ದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕಿಡಿಕಾರಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ಗೆ ಪ್ರಧಾನಿ ಕುರ್ಚಿ ಎನ್ನೋದು ನೆಹರು ಕುಟುಂಬಕ್ಕೆ ಮಾತ್ರ ಎಂದುಕೊಂಡಿದ್ದಾರೆ.. ಹೀಗಾಗಿ ಮೋದಿಯನ್ನು ಬೈತಾರೆ.. ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಮೋದಿಯನ್ನು ಮೌತ್ ಕಾ ಸೌದಾಗರ್ ಎಂದಿದ್ದರು, ಕಾಂಗ್ರೆಸ್ ಹತಾಶವಾಗಿದೆ.. ಕಾಂಗ್ರೆಸ್ ಟೀಕಿಸಿದ್ರೆ, ದೇಶದ ಜನರು ಮೋದಿಯನ್ನು ಪ್ರೀತಿ ಮಾಡ್ತಾರೆ ಎಂದು ವಿಶ್ವಾಸದ ಮಾತುಗಳನ್ನಾಡಿದ್ರು