Publish Date: Mon, 01 May 2023 (19:50 IST)
Updated Date: Mon, 01 May 2023 (19:43 IST)
ಶಾಸಕ ಪ್ರಿಯಾಂಕ್ ಖರ್ಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ನಾಲಾಯಕ್ ಎಂದಿದ್ದಾರೆ.. ಅವರ ತಂದೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮೋದಿಯವರನ್ನು ವಿಷ ಸರ್ಪ ಎಂದಿದ್ದರು. ಇದು ಎಷ್ಟು ಸರಿ ಎಂದು ಬಿಜೆಪಿ MLC ಚಲವಾದಿ ನಾರಾಯಣ್ ಸ್ವಾಮಿ ಪ್ರಶ್ನಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ನವರು ಬೈದಷ್ಟು ಕಮಲ ಅರಳುತ್ತದೆ.. ಕಾರಣ ಕಮಲ ಬೆಳೆಯೋದೆ ಕೆಸರಲ್ಲಿ. ಅವರು ಹತಾಶೆಯಲ್ಲಿದ್ದಾರೆ.. ರಾಜ್ಯದಲ್ಲಿ ಮೋದಿ ಅಲೆ ಎದ್ದಿದೆ.. ಆದ್ರಿಂದ ಮೋದಿಯನ್ನು ಟಾರ್ಗೆಟ್ ಮಾಡ್ತಿದ್ದಾರೆ. ಹೀಗಾಗಿ ಕಾಂಗ್ರೆಸ್ನವರು ಹತಾಶರಾಗಿದ್ದಾರೆ ಎಂದು ವ್ಯಂಗ್ಯವಾಡಿದ್ರು.