Publish Date: Wed, 25 Sep 2019 (18:16 IST)
Updated Date: Wed, 25 Sep 2019 (18:18 IST)
ಕಳೆದು ತಿಂಗಳು ಮೊಬೈಲ್ ಗೆ ಕರೆನ್ಸಿ ಹಾಕಿಸಲಿಲ್ಲ ಅನ್ನೋ ಕಾರಣಕ್ಕೆ ಮಗನೊಬ್ಬ ಪೊಲೀಸ್ ಆಗಿದ್ದ ಅಪ್ಪನನ್ನೇ ಕೊಲೆ ಮಾಡಿದ್ರೆ, ಈಗ ಮೊಬೈಲ್ ಗಾಗಿಯೇ ಮಗನೊಬ್ಬ ತನ್ನ ತಂದೆಯನ್ನೇ ಹತ್ಯೆ ಮಾಡಿದ್ದಾನೆ.
ಆತನ ಪತ್ನಿ ಊರಿಗೆ ಹೋಗಿದ್ದಳು. ಹೀಗಾಗಿ ಮಗ ಮತ್ತು ಅಪ್ಪ ಮಾತ್ರ ಮನೆಯಲ್ಲಿದ್ದರು. ಮೊಬೈಲ್ ಗೀಳು ಅಂಟಿಸಿಕೊಂಡಿದ್ದ ಮಗ ತಡರಾತ್ರಿವರೆಗೂ ಮೊಬೈಲ್ ನಲ್ಲೇ ಕಾಲ ಕಳೆಯುತ್ತಿದ್ದನು. ಇದರಿಂದ ರೋಸಿ ಹೋದ ಅಪ್ಪ, ಮಗನ ಮೊಬೈಲ್ ನ್ನು ತನ್ನ ಹತ್ತಿರ ಇಟ್ಟುಕೊಂಡಿದ್ದಾರೆ.
ಅಪ್ಪ ಮೊಬೈಲ್ ಕಸಿದುಕೊಂಡದ್ದರಿಂದ ಕೆರಳಿದ 16 ವರ್ಷದ ಪುನೀತ್ ಎಂಬಾತ ತನ್ನ ಅಪ್ಪ ಬಿಲ್ ಕಲೆಕ್ಟರ್ ಆಗಿರೋ ಜಯಪ್ಪ ರನ್ನು ಕತ್ತು ಕೊಯ್ದು ಕೊಲೆ ಮಾಡಿದ್ದಾನೆ.
ಚಿತ್ರದುರ್ಗದ ಕಾವಲು ಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಆರೋಪಿಯನ್ನು ಬಂಧನ ಮಾಡಲಾಗಿದೆ.