. ಮಹಿಳೆಯನ್ನು ಬೆತ್ತಲೆಗೊಳಿಸಿ ಥಳಿಸಿದ ಅಮಾನವೀಯ ಪ್ರಕರಣವು ಬೆಚ್ಚಿ ಬೀಳಿಸುವಂತಹದ್ದು. ಅಪರಾಧಿ ಸಮಾಜ ನಿರ್ಮಾಣದಲ್ಲಿ ಅಧಿಕಾರಸ್ಥರ, ಪಟ್ಟಭದ್ರರ ಹೇಯ ಪಾತ್ರವನ್ನು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಖಂಡಿಸುತ್ತದೆ.
ನಾಗರೀಕ ಮನಸುಗಳು ಎಚ್ಚೆತ್ತುಕೊಳ್ಳದಿದ್ದರೆ ಕ್ರೌರ್ಯದ ಕೃತ್ಯಗಳು ಹೆಚ್ಚುತ್ತಲೇ ಹೋಗುತ್ತವೆ.
ಯಾದಗಿರಿ ಜಿಲ್ಲೆಯ ಆಡಳಿತ ಯಂತ್ರ ಏನು ಮಾಡುತ್ತಿದೆ? ಚುನಾಯಿತ ಮಂದಿ ಎಲ್ಲಿದ್ದಾರೆ?
ಮಹಿಳೆಯನ್ನು ಬೆತ್ತಲೆಗೊಳಿಸಿ ಬಾರ್ಬರಿಕ ಲೈಂಗಿಕ ದೌರ್ಜನ್ಯ ಎಸಗಿದವರನ್ನು ಶಿಕ್ಷಿಸಲು ಹಾಗೂ
ಮಹಿಳಾ ಸಾಗಾಣಿಕೆಯ ದಂಧೆಯಲ್ಲಿ ತೊಡಗಿದ್ದನ್ನು ಸಮಗ್ರ ತನಿಖೆಗೆ ಆಗ್ರಹಿಸಿ ಶಿಕ್ಷಿಸಲು ಒತ್ತಾಯಿಸಿ.
ಇಂದು ಸಂಜೆ 4.30ಕ್ಕೆ ಬೆಂಗಳೂರಿನ ಮೈಸೂರು ವೃತ್ತದಲ್ಲಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯಿಂದ ಪ್ರತಿಭಟನೆಯನ್ನು ಮಾಡಲಾಯಿತು.
ಈ ಪ್ರತಿಭಟನೆ ಯಲ್ಲಿ ರಾಜ್ಯದ್ಯಕ್ಷರಾದ ದೇವಿ. ರಾಜ್ಯ ಪ್ರಧಾನ ಗೌರಮ್ಮ. ರಾಜ್ಯ ಉಪಾಧ್ಯಕ್ಷ ರಾದ ಕೆ.ನೀಲಾ. ಡಾ. ಮೀನಾಕ್ಷಿ ಬಾಳಿ.ಕೆ.ಎಸ್.ಲಕ್ಷ್ಮಿ. ಲಲಿತಶೆಣೈ ಭಾಗವಹಿಸಿದ್ದರು