ಯುವಕ ಯುವತಿಯರ ಮೋಜು ಮಸ್ತಿ ಪ್ರಕರಣದ ತನಿಖೆ ಚುರುಕು ಗೊಂಡಿದೆ.. ಅದ್ರೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದವರು ಯಾರು ಎನ್ನುವುದು ಮಾತ್ರ ಇಲ್ಲಿಯವರೆಗೂ ನಿಗೂಢವಾಗಿದೆ.. ಸಂಚಾರಿ ಪೊಲೀಸ್ ಠಾಣೆಯಲ್ಲಿ ಯಾರ ವಿರುದ್ಧ ಪ್ರಕರಣ ದಾಖಲಾಗಿದೆ.. ಅವರು ಎಲ್ಲೆಲ್ಲಿ ಸುತ್ತಾಡಿದ್ರೂ ಎನ್ನುವುದರ ಬಗ್ಗೆ ಕೂಡ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.
ಬೆಂಜ್ ಕಾರಿನಲ್ಲಿ ಯುವಕ ಯುವತಿಯರ ಜಾಲಿ ರೆಡ್ ಸಂಬಂಧಿಸಿದಂತೆ ಸದಾಶಿವನಗರ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಕಾರು ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ.. ಕಾರು ಮಾಲೀಕನಿಗೆ ನೋಟಿಸ್ ನೀಡಿರುವ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. ಲಾ ಆಂಡ್ ಆರ್ಡರ್ ಪೊಲೀಸರಿಂದ ಕಾರು ವಶಕ್ಕೆ ಪಡೆದು ಕೊಂೠಿರುವ ಸದಾಶಿವನಗರ ಟ್ರಾಫಿಕ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.ಕಾರಿನಲ್ಲಿ ಒಟ್ಟು ಐದು ಜನ ಮೋಜು ಮಸ್ತಿ ಮಾಡಿ ಪುಂಡಾಟ ಮೆರೆದಿದ್ರು.. ಜಾಲಿ ರೈಡ್ ವೇಳೆ ಬೆಂಜ್ ಕಾರಿನ ಕಿಟಕಿ ಮತ್ತು ರೂಪ್ ಟಾಪ್ ನಲ್ಲಿ ಕುಳಿತು ಡ್ಯಾನ್ಸ್ ಮಾಡಿಕೊಂಡು ಮೋಜು ಮಸ್ತಿ ಮಾಡಿದ್ರು...ಅದರಲ್ಲಿ ಮೂವರು ಯುವಕರು, ಇಬ್ಬರು ಯುವತಿಯರು ಎಂಬುದಷ್ಟೆ ಪತ್ತೆಯಾಗಿದೆ. ಕಾರಿನಲ್ಲಿ ಯಾರ್ಯಾರು ಇದ್ದರು, ಎಲ್ಲಿಂದ ಹೊರಟಿದ್ರು, ಎಲ್ಲೆಲ್ಲಿ ಸುತ್ತಾಡಿದ್ರು ಅನ್ನೋದು ಮಾತ್ರ ಇನ್ನೂ ನಿಗೂಢವಾಗಿದೆ.
ಈ ಬಗ್ಗೆ ತನಿಖೆ ನಡೆಸುತ್ತಿರುವ ಪೊಲೀಸರು ಸ್ಯಾಂಕಿ ರಸ್ತೆಯ ಸಿಸಿಟಿವಿಗಳ ಪರಿಶೀಲನೆ ನಡೆಸುತ್ತಿದ್ದಾರೆ.. ಕಾರು ಚಲಿಸಿದ ಮಾರ್ಗದಲ್ಲಿನ ಎಲ್ಲಾ ಸಿಸಿಟಿವಿಗಳ ಪರಿಶೀಲನೆಗೂ ಪೊಲೀಸರು ಮುಂದಾಗಿದ್ದಾರೆ.. ಐಪಿಸಿ ಸೆಕ್ಷನ್ 279 ಅಡಿ ರ್ಯಾಷ್ ಡ್ರೈವಿಂಗ್ ಮತ್ತು ಸೆಕ್ಷನ್ 336ರ ಅಡಿ ವ್ಯಕ್ತಿಯ ಜೀವಕ್ಕೆ ಅಥವಾ ಇತರರ ವೈಯಕ್ತಿಕ ಸುರಕ್ಷತೆ ದಕ್ಕೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿದೆ.
ಇನ್ನೊಂದು ಕಡೆ ಪ್ರಕರಣದಲ್ಲಿ ಯುವಕರ ವರ್ತನೆ ಕುರಿತು ಖಾಕಿ ಟೀಂ ಅನುಮಾನ ವ್ಯಕ್ತಪಡಿಸುತ್ತಿದೆ.. ಮದ್ಯಪಾನ ಮಾಡಿ ರೆಡ್ ಮಾಡಿದ್ದಾರಾ ಎನ್ನುವ ಅನುಮಾನ ಮೂಡುತ್ತಿದೆ. ಇಷ್ಟು ಸಮಯದ ನಂತರ ಪರೀಕ್ಷೆ ನಡೆಸಿದ್ರೂ ಕೂಡ ಅದು ಮದ್ಯಪಾನ ಮಾಡಿರೋದು ಪತ್ತೆಯಾಗೋದಿಲ್ಲ... ಹೀಗಾಗಿ ಪೊಲೀಸರ ಕೈಗೆ ಸಿಗದೆ ಕಣ್ಣಾ ಮುಚ್ಚಾಲೆ ಆಟವಾಡ್ತಿದಾರ ಎನ್ನುವ ಪ್ರಶ್ನೆ ಮೂಡುತ್ತಿದೆ.