ಇಂಜಿನಿಯರಿAಗ್ ಪ್ರವೇಶಾತಿಗಾಗಿ ನಡೆಸಲಾಗುವ ಜಂಟಿ ಪ್ರವೇಶ ಪರೀಕ್ಷೆಗೆ ಇಂದಿನಿAದ ರಿಜಿಸ್ಟ್ರೇಶನ್ ಪ್ರಾರಂಭವಾಗಿದೆ. ಜೆಇಇ ಅಡ್ವಾನ್ಸ್ ಪರೀಕ್ಷೆಗೆ ನೋಂದಣಿ ಯಾವ ಸಮಯದಲ್ಲಿ ಆರಂಭವಾಗುತ್ತೆ ಎಂಬುದು ಇನ್ನೂ ಘೋಷಣೆಯಾಗಿಲ್ಲ. ಜೆಇಇ ಮೇನ್ ಸ್ಕ್ರೀನಿಂಗ್ ಟೆಸ್ಟ್ನ ಫಲಿತಾಂಶ ಹೊರಬಿದ್ದ ಬಳಿಕ ಜೆಇಇ ಅಡ್ವಾನ್ಸ್ಗೆ ರಿಜಿಸ್ಟ್ರೇಶನ್ ಶುರುವಾಗುತ್ತದೆ ಎಂದು ಹೇಳಲಾಗಿದೆ. ಜೆಇಇ ಅಡ್ವಾನ್ಸ್ಗೆ ಅರ್ಜಿ ಸಲ್ಲಿಸಲು ಸೆಪ್ಟೆಂಬರ್ ೧೯ ಕೊನೆಯ ದಿನಾಂಕವಾಗಿದೆ. ಅರ್ಜಿ ಶುಲ್ಕ ಪಾವತಿಸಲು ಸೆ.೨೦ ಕಡೆಯ ದಿನವಾಗಿದೆ.
ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರವು ಇನ್ನೂ ಸಹ ಜೆಇಇ ಮೇನ್-೨೦೨೧ ೪ನೇ ಸೆಶನ್‌ನ ಫಲಿತಾಂಶವನ್ನು ಪ್ರಕಟ ಮಾಡಿಲ್ಲ. ಆದಾಗ್ಯೂ ವಿದೇಶಿ ಪ್ರಜೆಗಳಿಗೆ ಜೆಇಇ ಅಡ್ವಾನ್ಸ್೨೦೨೧ ಆನ್‌ಲೈನ್ ರಿಜಿಸ್ಟ್ರೇಶನ್ ಪ್ರಾರಂಭಿಸಿದೆ. ೧೨ನೇ ತರಗತಿ ಓದುತ್ತಿರುವ ಅಥವಾ ರುವ ವಿದೇಶಿ ಅಭ್ಯರ್ಥಿಗಳು ಭಾರತದಲ್ಲಿ ಜೆಇಇ ಅಡ್ವಾನ್ಸ್ಗೆ ಅರ್ಜಿ ಸಲ್ಲಿಸಬಹುದು.