ಬಸ್ ಗಳು ರಶ್ ಆಗುತ್ತಿರೋದರಿಂದ ಪ್ರಯಾಣಿಕರು ನಮ್ಮ ಮೆಟ್ರೋ ಕಡೆ ಮುಖಮಾಡುತ್ತಿದ್ದಾರೆ .ಶಾಲಾ-ಕಾಲೇಜು ವಿದ್ಯಾರ್ಥಿಗಳು, ಉದ್ಯಮಿ ಹಾಗೂ ಪುರುಷರು ಕಿಕ್ಕಿರಿದು ತುಂಬಿದ್ದ ಬಸ್ಗಳಲ್ಲಿ ಪ್ರಯಾಣಿಸಲು ಇಚ್ಚಿಸದೆ ನಮ್ಮ ಮೆಟ್ರೋದಲ್ಲಿ ಪ್ರಯಾಣ ಮಾಡ್ತಿದ್ದಾರೆ.ಮೇ ತಿಂಗಳಲ್ಲಿ ಸರಾಸರಿ 5.6 ಲಕ್ಷ ಪ್ರಯಾಣಿಕರು ಪ್ರತಿದಿನ ನಮ್ಮ ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದರು.ಶಕ್ತಿ ಯೋಜನೆ ಜಾರಿ ನಂತರ ಪ್ರಯಾಣಿಕರ ಸಂಖ್ಯೆ ದಿನಕ್ಕೆ 6.1 ಲಕ್ಷಕ್ಕೆ ಏರಿಕೆಯಾಗಿದೆ.ಹಿಂದಿನವಾರ ಜುಲೈ 15 ರಂದು 6.7 ಲಕ್ಷ ಜನರು ಪ್ರಯಾಣಿಸುವ ಮೂಲಕ ಸಾರ್ವಕಾಲಿಕ ದಾಖಲೆಯಾಗಿದೆ. ಮತ್ತೆ ಮೆಟ್ರೋದಲ್ಲಿ ಹೊಸದಾಗಿ ಪ್ರಯಾಣಿಕರ ಸಂಖ್ಯೆ 40,000ಕ್ಕೆ ಏರಿಕೆಯಾಗಿದೆ.ಇದರಿಂದ ದಿನಕ್ಕೆ 15 ಲಕ್ಷ ಆದಾಯ ಹರಿದು ಬರುತ್ತಿದೆ ಎಂದು ಮೆಟ್ರೋ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.